ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು.! ನವರಾತ್ರಿಯ ಮೊದಲ ದಿನದಂದೇ ದೇಶವಾಸಿಗಳಿಗೆ ಸಿಹಿ ಸುದ್ದಿ.?

New Delhi: ಪ್ರಧಾನಿ ನರೇಂದ್ರ ಮೋದಿ ವಿಶ್ವ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು, ತಮ್ಮ ಶ್ರೇಷ್ಠ ಆಡಳಿತದ ಮೂಲಕ ವಿಶ್ವದ ಗಮನ ಭಾರತದ ಕಡೆ ತಿರುಗುವಂತೆ ಮಾಡಿ ಅಧುನಿಕ ರಾಜಕೀಯದ ಸಂತ. ದೇಶದ ಜನರಿಗೆ ವಿಶೇಷ ಯೋಜನೆಗಳ ಮೂಲಕ ಮಾಹಿತಿಯನ್ನು ನೀಡಲು ವಿಡಿಯೋ ಸಂದೇಶದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುವುದು ಸಾಮಾನ್ಯ ಅದೇ ರೀತಿಈ ಬಾರಿಯೂ ಪ್ರಧಾನಿ ಮೋದಿ ದೇಶದ ಜನರಿಗೆ ಖುಷಿ ಸುದ್ದಿಯೊಂದನ್ನು ತಂದಿದ್ದಾರೆ.

ಇತ್ತೀಚೆಗೆ Next Gen ಜಿ.ಎಸ್.ಟಿ 2.0 ಪರಿಷ್ಕರೆಯನ್ನು ಮಾಡಲಾಗಿತ್ತು. ಇದನ್ನು ನವರಾತ್ರಿಯ ದಿನದಿಂದ ಜಾರಿಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ೨೨ರ ಸೋಮವಾರದಿಂದ ಆರಂಭವಾಗಲಿರುವ ನವರಾತ್ರಿಯ ಶುಭ ಸಂಧರ್ಭದಲ್ಲಿ ದೇಶದ ಜನರಿಗೆ ನವರಾತ್ರಿಯ ಶುಭಶಯಗಳನ್ನು ತಿಳಿಸುತ್ತಾ ಹೊಸ ಜಿ.ಎಸ್.ಟಿ ತೆರಿಗೆಯ ಪರಿಷ್ಕರಣೆ ದರ ಆರಂಭವಾಗಲಿದೆ. ನಾಳೆಯಿಂದ ಜಿ.ಎಸ್.ಟಿ ಉತ್ಸವ ಆರಂಭವಾಗಲಿದೆ ಎಂದು ಮೋದಿ ತಿಳಿಸಿದ್ದಾರೆ. ಇದರಿಂದ ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಭಾರೀ ಪ್ರಮಾಣದ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. 

ಪ್ರಧಾನಿ ಮೋದಿ ತಮ್ಮ ಮಾತಿನಲ್ಲಿ ಬಹುತೇಕ ಅಗತ್ಯ ವಸ್ತುಗಳ ಮೇಲಿನ ಜಿ.ಎಸ್.ಟಿ ತೆರಿಗೆಯನ್ನು ರದ್ದುಗೊಳಿಸಲಾಗಿದ್ದು ಹಾಗೂ ಕೆಲ ವಸ್ತುಗಳ ತೆರಿಗೆಯನ್ನು ಕೇವಲ ಶೇ ೫ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ. ಟಿವಿ, ಫ್ರಿಜ್, ವಾಹನಗಳನ್ನು ಖರೀದಿಸುವವರಿಗೆ ಈ ಹೊಸ ಜಿ.ಎಸ್.ಟಿ ತೆರಿಗೆ ಭಾರೀ ಪ್ರಮಾಣದ ಉಳಿತಾಯಕ್ಕೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.

ಹೋಟೆಲ್ ಗಳಲ್ಲಿ ಖರೀದಿಸುವ ತಿಂಡಿ ತಿನಿಸುಗಳಿಗೆ, ದೂರದ ಊರಿಗೆ ಬೆಳೆಸುವ ಪ್ರಯಾಣ ಇವುಗಳ ಜಿ.ಎಸ್.ಟಿ ತೆರಿಗೆ ಕಡಿಮೆಯಾಗಲಿದ್ದು ಜನರ ಮನದಲ್ಲಿ ಮಂದಹಾಸ ಮೂಡಿಲಿದೆ ಎಂದರು. ಆತ್ಮ ನಿರ್ಭರ ಭಾರತದ ಮೂಲಕ ನಮ್ಮ ದೇಶಿಯ ವಸ್ತುಗಳನ್ನು ನಾವು ಖರೀದಿಸುವ ಮೂಲಕ ನಾವು ಆತ್ಮ ನಿರ್ಭರರಾಗಬೇಕು ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.


Post a Comment

0 Comments