ಮೂಡಬಿದ್ರೆ ಹಂಡೇಲು ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಕಸ ತ್ಯಾಜ್ಯ ರಾಶಿ.!

ಮೂಡಬಿದ್ರೆಯಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ವಿದ್ಯಾಗಿರಿ ದಾಟಿ ಮುಂದೆ ಸಾಗುವಾಗ ಈಗೀನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ರಾಶಿ ರಾಶಿ ಕಸಗಳನ್ನು ಎಸೆಯಲಾಗುತ್ತಿದೆ. ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಪ್ರದೇಶ ಇದಾಗಿರುವುದರಿಂದ ಹಲವಾರು ಬಾರಿ ಸ್ವಚ್ಚತಾ ಅಭಿಯಾನ ನಡೆಸಲಾಗಿತ್ತು, ಮೊದ ಮೊದಲು ಸ್ಥಳೀಯ ನಿವಾಸಿಗಳು ಮನೆಯ ತ್ಯಾಜ್ಯಗಳನ್ನು ಇಲ್ಲಿ ಬಂದು ಎಸೆಯುತ್ತಿದ್ದರು ಅದರೆ ಈಗ ದೊಡ್ಡ ದೊಡ್ಡ ಕಟ್ಟಡಗಳ ಕಸ ಹಾಗೂ ತ್ಯಾಜ್ಯಗಳನ್ನು ರಾಜರೋಷವಾಗಿ ಇಲ್ಲಿ ಬಂದು ಸುರಿಯಲಾಗುತ್ತಿದೆ.

ಕಸ ತ್ಯಾಜ್ಯಗಳನ್ನು ಈ ಪ್ರದೇಶದಲ್ಲಿ ಎಸೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸೋಲಾರ್ ಸಿ.ಸಿ ಕ್ಯಾಮೆರಾವನ್ನು ಜಾಗದಲ್ಲಿ ಆಳವಡಿಸಲಾಗಿದೆಯಾದರೂ ಸಿಸಿ ಕ್ಯಾಮೆರಾಗೆ ನಾಚಿಕೆಯಾಗುವಂತೆ ಜನರು ಮಾತ್ರ ಯಾವುದೇ ಭಯ ಭೀತಿಯಿಲ್ಲದೆ ಕಸ ಎಸೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಮಾತನಾಡಿರುವ ಪುತ್ತಿಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಭೀಮಾ ನಾಯಕ್, ಸಿಸಿ ಕ್ಯಾಮೆರಾವನ್ನು ಇನ್ನಷ್ಟು ಮೇಲ್ದರ್ಜೆಗೆರಿಸಿ ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು ಹಾಗೂ ಈಗಾಗಲೇ ಬಿದ್ದಿರುವ ಕಸಗಳನ್ನು ಶೀಘ್ರದಲ್ಲೆ ವಿಲೇವಾರಿ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು. 


Post a Comment

0 Comments