ಮೂಡುಬಿದ್ರೆ: ಬೆದ್ರದ ವೈಭವದ 63ನೇ ವರ್ಷದ ಗಣೇಶೋತ್ಸವ ಯಶಸ್ವಿಯಾಗಿ ಕಳೆದ ದಿನ ಸಂಪನ್ನಗೊಂಡಿದೆ. ಜನತೆ ಗಣಪನನ್ನು ಕಣ್ತುಂಬಿಕೊಳ್ಳಲು ತಂಡ ತಂಡವಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅದರೆ ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಕನಸು ನನಸಾಗಿಸುವಲ್ಲಿ ಸಹಕರಿಸುತ್ತಿದ್ದೇವ ಎಂಬ ಪ್ರಶ್ನೆ ನಮ್ಮಲ್ಲಿ ಮೂಡದೆ ಇರದು. ಅದಕ್ಕೆ ಪ್ರಮುಖ ಕಾರಣ ಇದು ಸ್ನೇಹಿತರೆ. ಈ ವರ್ಷ ಮೂಡುಬಿದ್ರೆಯ ಗಣೇಶೋತ್ಸವದ ಮೆರವಣಿಗೆಯ ಬಳಿಕ ಬಹಳಷ್ಟು ಕಸ ರಸ್ತೆಯಲ್ಲಿ ಕಂಡೆವು, ಕಸಗಳು ಬಿಸಾಡಲು ಚೀಲಗಳು ಇಟ್ಟರು, ರಸ್ತೆಯ ಉದ್ದಕ್ಕೂ ಕಸಗಳ ರಾಶಿ ಕಾಣುತ್ತಿದ್ದವು.
ಪೌರಕಾರ್ಮಿಕರು ಅವರ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ, ರಾತ್ರೋರಾತ್ರಿ ನಾವುಗಳು ಬೇಜವಾಬ್ದಾರಿಗಳಾಗಿ ಹಾಕಿದ ಕಸಗಳನ್ನು ಪೌರಕಾರ್ಮಿಕರು ಸ್ವಚ್ಛ ಗೊಳಿಸಿದ್ದಾರೆ. ಪೌರಕಾರ್ಮಿಕರನ್ನು ಹೊಗಳಲೇ ಬೇಕು, ಅವರು ಅವರ ವೃತ್ತಿಯನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ. ಅದರೆ ಜವಾಬ್ದಾರಿಯುತ ಪ್ರಜೆಗಳಾಗಿ ನಾವೇನು ಮಾಡಿದ್ದೇವೆ.? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು.
ರಸ್ತೆಗಳ ಪಕ್ಕದಲ್ಲಿ ಹಸಿ ಕಸ ಹಾಗೂ ಒಣ ಕಸಗಳನ್ನು ಹಾಕಲು ಪ್ರತ್ಯೇಕ ಚೀಲಗಳನ್ನು ಇಟ್ಟರು ನಾವುಗಳು ಅಲ್ಲಲ್ಲಿ ತಿಂದ ಕಸಗಳನ್ನು ಚೀಲಗಳಲ್ಲಿ ಹಾಕದೆ ರಸ್ತೆಗಳಲ್ಲಿ ಬಿಸಾಡಿ ಬೇಜವಾಬ್ದಾರಿ ತೋರಿಸಿದೇವು. ಕಸಗಳನ್ನು ಸರಿಯಾದ ಜಾಗದಲ್ಲಿ ಹಾಕಿ ಎಂದು ತಿಳಿಸಿದರು ಜನರು ಅದನ್ನು ಗೋಜಿಗೆ ತೆಗೆದುಕೊಳ್ಳಲೆ ಇಲ್ಲ. ಅದು ಬಿಡು ಪೌರ ಕಾರ್ಮಿಕರು ಸ್ವಚ್ಚಗೊಳಿಸುತ್ತಾರೆ ಎಂದು ಕಸವನ್ನು ಅಲ್ಲೇ ಹಾಕಿ ಉಢಾಪೆಯ ಮಾತುಗಳಾನ್ನಾಡಿ ಮುಂದುವರಿದೆವು. ಇದು ಸರಿಯಾದ ಕ್ರಮವಲ್ಲ. ಸಾವಿರಾರು ಜನರು ಸೇರಿದಾಗ ಹೆಚ್ಚಿನ ಪ್ರಮಾಣದ ಕಸ ಕಡ್ಡಿಗಳು ರಾಶಿ ಬಿಳುತ್ತಾವೆ ಅದನ್ನು ಸರಿಯಾದ ಕ್ರಮದಲ್ಲಿ ನಾವುಗಳೇ ಚೀಲಗಳಲ್ಲಿ ಹಾಕಿದರೆ ಅರ್ಧದಷ್ಟು ಕೆಲಸಗಳು ಕಡಿಮೆಯಾಗುತಿತ್ತು. ಇದರ ಜೊತೆಗೆ ವ್ಯಾಪಾರಿಗಳು ಕಸವನ್ನು ವಿಲೇವಾರಿ ಮಾಡಲು ಸರಿಯಾದ ವ್ಯವಸ್ಥೆ ಮಾಡಬೇಕು. ವ್ಯಾಪಾರ ಮಾಡುವುದು ಮಾತ್ರ ನಿಮ್ಮ ಕೆಲಸವಲ್ಲ ಬದಲಾಗಿ ಅಲ್ಲಿ ಉತ್ಪತ್ತಿಯಾಗುವ ಕಸಗಳನ್ನು ನಿರ್ವಹಣೆಯ ವ್ಯವಸ್ಥೆಯನ್ನು ನೀವೂಗಳೇ ಮಾಡಬೇಕು. ಮಾರುಕಟ್ಟೆಯಲ್ಲಿ ಜನರನ್ನು ಮರಳುಗೊಳಿಸಲು Paper Blaster ಮಷಿನ್ ಗಳು ಬಂದಿದ್ದು, ಇದನ್ನು ಟ್ಯಾಬ್ಲೋಗಳಲ್ಲಿ ಆಳವಡಿಕೆ ಮಾಡಿ ರಸ್ತೆಯುದ್ದಕ್ಕೂ ಕಾಗದಗಳ ಚೂರನ್ನು ಹಾರಿಸಲಾಗುತ್ತದೆ ಇವುಗಳು ವಿಪರಿತ ಕಸಗಳ ಉತ್ಪತ್ತಿಗೆ ದಾರಿ ಮಾಡಿಕೊಡುತ್ತಿದೆ ಇವುಗಳನ್ನು ಟ್ಯಾಬ್ಲೋಗಳಲ್ಲಿ ಆಳವಡಿಸಲು ಅವಕಾಶ ಮಾಡಿಕೊಡಬಾರದು. ಇವುಗಳ ಬಗ್ಗೆ ಪುರಸಭೆಯೂ ಸರಿಯಾದ ಕ್ರಮಗಳನ್ನು ಕೈಗೊಳಬೇಕು. ಜವಾಬ್ದಾರಿಯುತ ಪ್ರಜೆಗಳಾದ ನಾವುಗಳು ನಮ್ಮ ಊರನ್ನು ನಮ್ಮ ಮನೆಯಂತೆ ಕಾಣುವಂತಾಗಬೇಕು, ನಿಮ್ಮ ಮನೆಗಳಲ್ಲಿ ನೀವೂ ಎಲ್ಲೆಂದರಲ್ಲಿ ಕಸ ಹಾಕುತ್ತಿರ ಅಥವಾ ಕಸದ ಬುಟ್ಟಿಯಲ್ಲಿ ಹಾಕುತ್ತಿರಾ ಎಂದು ಒಮ್ಮೆ ಯೋಚಿಸಿ.! ಅದೇ ರೀತಿ ನಮ್ಮ ಊರನ್ನು ನಮ್ಮ ಮನೆಯಂತೆ ಯೋಚಿಸಿ ಸರಿಯಾದ ಸ್ಥಳಗಳನ್ನು ಕಸವನ್ನು ಹಾಕುವಂತಾಗಲಿ ಆಗ ಮಾತ್ರ ಸ್ವಚ್ಚ ಭಾರತದ ಕನಸು ನನಸಾಗುತ್ತದೆ.
ನಮ್ಮ ಊರ ಸ್ವಚ್ಛತೆ ನಮ್ಮ ಜವಾಬ್ದಾರಿ ಅಲ್ಲವೇ.? ಇನ್ನೂ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳನ್ನು ಮಾಡದೆ ಜವಾಬ್ದಾರಿಯುತ ಪ್ರಜೆಗಳಾಗಿ ನಡೆದುಕೊಳ್ಳೋಣ.
0 Comments