ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಪೊನ್ನೆಚಾರಿಯ ಶಾರದೋತ್ಸವದ ಪ್ರಯುಕ್ತ ಶಾರದೋತ್ಸವ ಟೈಗರ್ಸ್ ವತಿಯಿಂದ 'ಊದುಪೂಜೆ' ಹಾಗೂ 'ಪಿಲಿನಲಿಕೆ' ಕಾರ್ಯಕ್ರಮ

ಮೂಡುಬಿದ್ರೆ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಪೊನ್ನೆಚಾರಿ ಇದರ ಪ್ರಯುಕ್ತ ಕಳೆದ ನಾಲ್ಕು ವರ್ಷಗಳಿಂದ 'ಶಾರದೋತ್ಸವ ಟೈಗರ್ಸ್' ಮೂಡಬಿದ್ರೆ ವರ್ಷಂಪ್ರತಿ ನಡೆಸುತ್ತಿರುವ ಊದುಪೂಜೆ ಹಾಗೂ ಪಿಲಿನಲಿಕೆ ಕಾರ್ಯಕ್ರಮ ನಾಲ್ಕನೆ ವರ್ಷವಾದ ಈ ಬಾರಿಯೂ ನಡೆಯಲಿದೆ. ಮೂಡುಬಿದ್ರೆಯ ಶಾರದೋತ್ಸವ ಟೈಗರ್ಸ್ ನೇತೃತ್ವದ ತಂಡದಿಂದ ನಡೆಯುವ ಪಿಲಿನಲಿಕೆ ಅಂಗವಾಗಿ ದಿನಂಕ 29-09-2025ರ ಸಂಜೆ ಏಳು ಗಂಟೆಗೆ ಊದುಪೂಜೆಯೂ ಮೂಡುಬಿದ್ರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ. 

30-09-2025ರ ಮಂಗಳವಾರದಂದು ನಡೆಯುವ ವೈಭವದ ಶಾರದ ದೇವಿಯ ಶೋಭಾಯಾತ್ರೆಯಲ್ಲಿ ಶಾರದೋತ್ಸವ ಟೈಗರ್ಸ್ 'ಪಿಲಿ ನಲಿಕೆ' ನಡೆಸಲಿದ್ದಾರೆ. ಸಮಾಜಕ್ಕೆ ಕಲಾ ಕಾಣಿಕೆಯನ್ನು ನೀಡುವ ನಿಟ್ಟಿನಲ್ಲಿ ಈ ತಂಡ ಕೆಲಸ ಮಾಡುತ್ತಿದೆ ಎಂದು ಪ್ರಮುಖರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಪಿಲಿ ನಲಿಕೆಯನ್ನು ನಡೆಸುತ್ತಿರುವ ತಂಡ ಈ ಬಾರಿ ನಾಲ್ಕನೇ ವರ್ಷದ ಪಿಲಿನಲಿಕೆ ನಡೆಸಲಿದೆ.
Tiger Dance


ಶಾರದೋತ್ಸವ ಟೈಗರ್ಸ್ ತಂಡದ ಈ ಕಾರ್ಯಕ್ಕೆ ಊರ ಹಾಗೂ ಪರವೂರ ಕಲಾಪೋಷಕರು ಬೆಂಬಲದ ಪ್ರೋತ್ಸಾಹವನ್ನು ನೀಡುವುದರ ಮೂಲಕ ಈ ತಂಡ ಇನ್ನು ನೂರು ವರ್ಷಗಳ ಕಾಲ ಕಲಾ ಸೇವೆಯನ್ನು ನಡೆಸುವಂತಾಗಬೇಕು. ಊದುಪೂಜೆ ಹಾಗೂ ಪಿಲಿನಲಿಕೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವೂ  ಪೊನ್ನೆಚಾರಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ದಿನಾಂಕ ೦೬-೦೯-೨೦೨೫ರ ಶನಿವಾರ ನಡೆಯಿತು.


Post a Comment

0 Comments