ಬಂಟ್ವಾಳ: ಬಂಟ್ವಾಳ ತಾಲೂಕಿನ ಕನ್ಯಾನದ ಕುಡುಪುಲ್ತಡ್ಕಾದ ರಾಮಚಂದ್ರ ಶೆಣೈಯವರು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಕಡುಬಡತನದಲ್ಲಿರುವ ಕುಟುಂಬಕ್ಕೆ ರಾಮಚಂದ್ರ ಶೆಣೈಯವರೇ ಆಧಾರವಾಗಿದ್ದರು ಅದರೆ internal Brain injury ಯಿಂದ ಜೀವನ್ಮರಣದ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿರುವ ರಾಮಚಂದ್ರ ಅವರ ಕುಟುಂಬಕ್ಕೆ ಲಕ್ಷಾಂತರ ರೂಪಾಯಿಗಳನ್ನು ಭರಿಸುವ ಶಕ್ತಿಯಿಲ್ಲ. ಕೃಷಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರಾಮಚಂದ್ರ ಶೆಣೈ ಅವರಿಗೆ ಒರ್ವ ಏಳು ವರ್ಷದ ಮಗಳಿದ್ದು, ಪತ್ನಿಯ ಜೊತೆಗೆ ವಾಸವಾಗಿದ್ದರು. ಸದ್ಯ ಮನೆಯ ಯಜಮಾನ ಆನಾರೋಗ್ಯದಿಂದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಸಹೃದಯಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಅದ್ದರಿಂದ ಈ ಸುದ್ದಿ ಓದಿದ ಪ್ರತಿಯೊಬ್ಬರು ತಮ್ಮ ಕೈಲಾದ ಸಹಾಯವನ್ನು ಮಾಡಿ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ಈ ಸುದ್ದಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
0 Comments