ಕಿಶೋರ್ ಮೂಡುಬಿದ್ರೆ ನಿರ್ದೇಶನ, 'ಚಿನ್ನಾರಿಮುತ್ತ' ನಟನೆಯಲ್ಲಿ ವಿಭಿನ್ನ ಕಥೆಯ ಮೂಲಕ ಕನ್ನಡದಲ್ಲಿ ಸದ್ದು ಮಾಡಲಿರುವ "ರಿಪ್ಪನ್ ಸ್ವಾಮಿ".!

ಕನ್ನಡ ಚಿತ್ರರಂಗದಲ್ಲಿ 'ಚಿನ್ನಾರಿ ಮುತ್ತ' ಎಂದು ಖ್ಯಾತಿ ಪಡೆದಿರುವ ವಿಜಯ್ ರಾಘವೇಂದ್ರ ತನ್ನ ವಿಭಿನ್ನ ಪಾತ್ರದ ಮೂಲಕ ಕನ್ನಡಿಗರನ್ನು ರಂಜಿಸಲು "ರಿಪ್ಪನ್ ಸ್ವಾಮಿ" ಎಂಬ ಚಿತ್ರದ ಮೂಲಕ ಮತ್ತೇ ತೆರೆಯಮೇಲೆ ಬರುತ್ತಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ಮೂಡಬಿದ್ರೆಯ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. ಮಲೆನಾಡು ಭಾಗದಲ್ಲಿ ನಡೆಯುವ ಕಥೆ ಇದಾಗಿದ್ದು, ನೂರಾರು ದಿನಗಳ ಅವಿರತ ಶ್ರಮವಹಿಸಿ ನಿರ್ದೇಶಕರು ಒಂದು ಉತ್ತಮ ಚಿತ್ರವನ್ನು ತೆರೆಯ ಮೇಲೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

Panchaanana Films ಬಂಡವಾಳದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಆಶ್ವಿನಿ ಚಂದ್ರಶೇಖರ್ ಹಾಗೂ ಪ್ರಕಾಶ್ ತುಮಿನಾಡ್ ಒಳಗೊಂಡ ಕಲಾವಿದರು ನಟಿಸಿದ್ದು, ಮೂಡಬಿದ್ರೆಯ ಸಂದೀಪ್ ಆಶ್ವಥ್ ಪುರ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದು, ಮೂಡಬಿದ್ರೆಯ ಮತ್ತೋರ್ವ ರಂಗ ಕಲಾವಿದ ಪ್ರತೀಕ್ ಸಾಲ್ಯಾನ್ ಅವರು ಆಭಿನಯಿಸಿದ್ದಾರೆ. 

"ರಿಪ್ಪನ್ ಸ್ವಾಮಿ" ಚಿತ್ರಕ್ಕೆ Samuel ABY ಅವರ ಸಂಗೀತ ನಿರ್ದೇಶನವಿದ್ದು, Ranghanath C M ಅವರ ಛಾಯಾಗ್ರಹಣದ ಕೈ ಚಲಕವಿದೆ. "ರಿಪ್ಪನ್ ಸ್ವಾಮಿ" ಚಿತ್ರದಲ್ಲಿ ವಿಜಯ್ ರಾಘವೇಂದ್ರ ಹಿಂದೆದಿಗಿಂತಲೂ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡಿಗರು ಅವರ ನಟನೆಯನ್ನು ಮತ್ತೊಮ್ಮೆ ಮೆಚ್ಚಿಕೊಂಡು ಈ ಚಿತ್ರವನ್ನು ಅಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಚಿತ್ರ ತಂಡದಲ್ಲಿದೆ. ನಿರ್ದೇಶಕರಾದ ಕಿಶೋರ್ ಮೂಡಬಿದ್ರೆಯವರ ಈ ವಿಭಿನ್ನ ಪ್ರಯತ್ನಕ್ಕೆ ಕನ್ನಡಿಗರು ಪ್ರೋತ್ಸಾಹ ನೀಡುವ ಮೂಲಕ ಬೆಂಬಲಿಸುತ್ತಾರೆ ಎಂಬ ಬಲವಾದ ವಿಶ್ವಾಸದಲ್ಲಿದ್ದಾರೆ. 

ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಹುಮ್ಮಸ್ಸಿನಲ್ಲಿರುವ "ರಿಪ್ಪನ್ ಸ್ವಾಮಿ" ಚಿತ್ರ ಇದೇ ಆಗಸ್ಟ್ 29ರಂದು ನಿಮ್ಮ ಹತ್ತಿರದ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದ್ದು, ನಮ್ಮ ಊರಿನ ನಿರ್ದೇಶಕರಾದ ಕಿಶೋರ್ ಮೂಡಬಿದ್ರೆಯವರ ಈ ಹೊಸ ಪ್ರಯತ್ನಕ್ಕೆ ಚಿತ್ರಮಂದಿರದಲ್ಲಿ ನಿಮ್ಮ ಟಿಕೆಟ್ ಗಳನ್ನು ಬುಕ್ ಮಾಡುವ ಮೂಲಕ ಬೆಂಬಲಿಸಿ. ಮರೆಯದಿರಿ "ರಿಪ್ಪನ್ ಸ್ವಾಮಿ" ಆಗಸ್ಟ್ 29ರಂದು ಚಿತ್ರಮಂದಿರದಲ್ಲಿ ವೀಕ್ಷಿಸಿ.




Post a Comment

0 Comments