ಕೆ.ಅಮರನಾಥ ಶೆಟ್ಟಿ ಚಾರೀಟೇಬಲ್ ಟ್ರಸ್ಟ್(ರಿ) ಉದ್ಘಾಟನಾ ಪ್ರಯುಕ್ತ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ ಮಾಹಿತಿ ಶಿಬಿರ

ಮೂಡುಬಿದ್ರೆ: ಆರೋಗ್ಯ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಕೆ.ಅಮರನಾಥ್ ಶೆಟ್ಟಿ ಚಾರೀಟೇಬಲ್ ಟ್ರಸ್ಟ್(ರಿ) ಹೊಸ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಕೆಲಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗಾಗಿ ಆಯೋಜಿಸಿದೆ. ದಿ.ಕೆ ಅಮರನಾಥ್ ಶೆಟ್ಟಿಯವರು ತಮ್ಮ ಜೀವನದುದ್ದಕ್ಕೂ ದೀನ ದಲಿತರ ಉದ್ದಾರದ ಜೊತೆಗೆ ಪರೋಪಕಾರಿಯಾಗಿ ಬದುಕಿದವರು. ಅವರ ಜೀವನದ ಆದರ್ಶಗಳನ್ನು ಧ್ಯೇಯವಾಗಿಟ್ಟುಕೊಂಡು ಕೆ.ಅಮರನಾಥ್ ಚಾರೀಟೇಬಲ್ ಟ್ರಸ್ಟ್ ಎಂಬ ಹೆಸರಿನಲ್ಲಿ ಮುಂದಿನ ಹೆಜ್ಜೆಯನ್ನಿಡುತ್ತಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ನ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವೂ ಇದೇ ಬರುವ 24-ಆಗಸ್ಟ್-2025ರ ಬೆಳಿಗ್ಗೆ 9.45ಕ್ಕೆ ಸರಿಯಾಗಿ ಮೂಡಬಿದ್ರೆಯ ಸ್ಕೌಟ್ಸ್ & ಗೈಡ್ಸ್ ನ ಕನ್ನಡ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.

ಕೆ.ಅಮರನಾಥ್ ಶೆಟ್ಟಿ ಚಾರೀಟೇಬಲ್ ಟ್ರಸ್ಟ್(ರಿ) ಮೂಡಬಿದ್ರೆ ಇದರ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಗ್ರಾಮೀಣ ಭಾಗದ ಜನರ ಆರೋಗ್ಯದ ಮಾಹಿತಿಯನ್ನು ಹೊಂದಿರುವ, ಕೊರೋನಾ ಸಂಧರ್ಭದಲ್ಲಿ ರಿಯಲ್ ವಾರಿಯರ್ಸ್ ಎಂದು ಹೆಸರು ಪಡೆದಿದ್ದು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಕ್ಯಾನ್ಸರ್ ತಪಾಸಣಾ ಹಾಗೂ ಮಾಹಿತಿ ಶಿಬಿರ ನಡೆಯಲಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಮಾರಕ ರೋಗಗಳ ಬಗೆಗೆ ಮುಂಜಾಗ್ರತ ಮಾಹಿತಿಯನ್ನು ನೀಡಲು ಸಹಕಾರಿಯಾಗುತ್ತದೆ ಎಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. 

ಟ್ರಸ್ಟ್ ಈ ಕಾರ್ಯಕ್ಕೆ A J Hospital & Research Center, Indian Cancer Society ಹಾಗೂ A J Cancer Institute ನ ಸಹಭಾಗಿತ್ವದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ Registration ಪ್ರಕ್ರಿಯೆಯು ಬೆಳಿಗ್ಗೆ 8.45ಕ್ಕೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಶಿಬಿರದ ಪ್ರಯೋಜನವನ್ನು ಪ್ರತಿಯೊಬ್ಬ ಕಾರ್ಯಕರ್ತೆಯರು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ. 


Post a Comment

0 Comments