ಮಾಣೂರು: ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ತಾರೀಕು 7.07.2025 ರಿಂದ 9.07.2025 ರ ತನಕ ನಡೆದ ಅಷ್ಟಮಂಗಳ ಪ್ರಶ್ನೆಯ ನಿವೃತ್ತಿಯ ಕಾರ್ಯಕ್ರಮದ ಅಂಗವಾಗಿ ತಾರೀಕು 21.09.2025 ನೇ ಗುರುವಾರ ಬೆಳಗ್ಗೆ 9 ಗಂಟೆಗೆ ಊರ-ಪರವೂರ ಗ್ರಾಮಸ್ಥರ ಸಮಸ್ತ ವಾಕ್ಯದೋಷ ನಿವೃತ್ತಿಗಾಗಿ ಮತ್ತು ಬ್ರಹ್ಮಕಲಶದ ಅಂಗವಾಗಿ ಮಾಣೂರು ಶ್ರೀ ಸುಬ್ರಾಯ ದೇವರಿಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ಶ್ರೀ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ
"ಪುಂಡಿ ಪಣವು " (ಮುಷ್ಠಿ ಕಾಣಿಕೆ) ಸಮರ್ಪಣೆ (1 ತಲೆಗೆ 1 ಮುಷ್ಠಿ ಚಿಲ್ಲರೆ + 101 ಕೈ ಕಾಣಿಕೆ + ½ಲೀ ಎಳ್ಳೆಣ್ಣೆ ದೇವರಿಗೆ ಸಮರ್ಪಿಸುವುದು ) ಹಾಗೂ ಸುಬ್ರಾಯ ದೇವರಿಗೆ ನವಕ ಕಲಶಾಭಿಷೇಕ, ಪಂಚಾಮೃತ ಅಭಿಷೇಕ. ಹಾಲು ಪಾಯಸ, ಗುಡಾನ್ನ ಸಮರ್ಪಣೆ, 3 ತೆಂಗಿನಕಾಯಿ ಗಣಹೋಮ, ಶ್ರೀ ಗಣಪತಿ ಶ್ರೀ ಪಾರ್ವತಿ ದೇವರಿಗೆ ವಿಶೇಷ ಪೂಜೆ, ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ, ಭಜನೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.
23.08.2025ನೇ ಬೆಳಿಗ್ಗೆ 9 ರಿಂದ 12 ತೆಂಗಿನಕಾಯಿ ಗಣಹೋಮ, ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಹೋಮ, ಸರ್ಪಸಂಸ್ಕಾರ, ಆಶ್ಲೇಷ ಬಲಿ, ಪವಮಾನ ಹೋಮ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ
23.08.2025ನೇ ಸಂಜೆ ಗಂಟೆ 5 ರಿಂದ ಲಘು ಸುದರ್ಶನ ಹೋಮ, ಮಹಾ ಸುದರ್ಶನ ಹೋಮ, ಅಘೋರಾಸ್ತ್ರ ಹೋಮ, ಶ್ರೀ ವನದುರ್ಗಾಹೋಮ, ಬಾಧಾಕರ್ಷಣೆ ಬಾಧೋಚ್ಚಾಟನೆ, ಪ್ರೇತಾಕರ್ಷಣೆ
24.08.2025ನೇ ಬೆಳಿಗ್ಗೆ 9 ಗಂಟೆಯಿಂದ 24,000 ಸಂಖ್ಯೆಯಲ್ಲಿ ತಿಲಹೋಮ . ದ್ವಾದಶ ಮೂರ್ತಿ ಆರಾಧನೆ , 24 ಸಲ ವಿಷ್ಣು ಸಹಸ್ರನಾಮ ಪಾರಾಯಣ ಪವಮಾನ ಹೋಮ, ಕೂಷ್ಮಾಂಡ ಸೂಕ್ತ ಹೋಮ, ಸುವಾಸಿನಿ ಆರಾಧನೆ ಭಾಗವತ ದಶಮಸ್ಕಂದ ಪಾರಾಯಣ ವಿಷ್ಣು ಪೂಜೆ ಪೂರ್ವಕ, ಸಾಯುಖ್ಯ ಪೂಜೆ, ಆಚಾರ್ಯಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.
24.08.2020ನೇ ರವಿವಾರ ಮಧ್ಯಾಹ್ನ 2 ಗಂಟೆಗೆ ಬ್ರಹ್ಮಕಲಶದ ಪೂರ್ವಭಾವಿಯಾಗಿ “ಸಮಾಲೋಚನಾ ಸಭೆ”
24.09.2025ನೇ ಸಂಜೆ ಗಂಟೆ 5 ರಿಂದ ಸ್ಥಳಶುದ್ದಿಗೆ ವಾಸ್ತುಪೂಜೆ. ವಾಸ್ತು ಬಲಿ, ರಾಕ್ಷಘ್ನ ಹೋಮ, ದಿಕಾಲ ಬಲಿ. 20.08.2025ನೇ ಬೆಳಿಗ್ಗೆ 9ಕ್ಕೆ ಶ್ರೀ ದೇವರಿಗೆ ಶುದ್ದಿ ಕಲಶಾಭಿಷೇಕ.
02.02.2026 ರಿಂದ ಮೊದಲ್ಗೊಂಡು 10.02.2026ರ ತನಕ ಶ್ರೀ ದೇವರ ಬ್ರಹಕಲಶಾಭಿಷೇಕ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಕೂಡಾ ಭಾಗವಹಿಸಿ ಸಲಹೆ ಸೂಚನೆಗಳನ್ನಿತ್ತು ತನು-ಮನ-ಧನ ಸಹಕಾರ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ ಶ್ರೀ ರಾಜೇಶ್ ಭಟ್ ಮಾಣೂರು, ಪ್ರಧಾನ ಅರ್ಚಕರು, ಶ್ರೀ ಸುಬ್ರಾಯ ದೇವಸ್ಥಾನ. ಶಶಿಧರ ಭಟ್ ಬೊಳ್ಳಾರಗುತ್ತು, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಸುಬ್ರಾಯ ದೇವಸ್ಥಾನ. ಭಾಸ್ಕರ ಜೆ ಮಾಣೂರು ಹಾಗೂ ಭಕ್ತಾಭಿಮಾನಿಗಳು ಮತ್ತು ನೀರುಮಾರ್ಗ ಗ್ರಾಮಸ್ಥರು.
ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ. ಶ್ರೀ ಸುಬ್ರಾಯ ಪ್ರಸನ್ನ:
ಶ್ರೀ ಸುಬ್ರಾಯ ದೇವಸ್ಥಾನ ಮಾಣೂರು, ನೀರುಮಾರ್ಗ
0 Comments