ಮೂಡಬಿದ್ರೆ: ಬೆದ್ರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೯ನೇ ವರ್ಷದ ವೈಭವದ ಮೊಸರು ಕುಡಿಕೆ ಉತ್ಸವ ವಿಜೃಂಭನೆಯಿಂದ ಸಂಪನ್ನಗೊಂಡಿದೆ. ಭಕ್ತರ ಬೇಡಿಕೆಯಂತೆ ಕೃಷ್ಣ ಕಟ್ಟೆಯಲ್ಲಿ ಕೃಷ್ಣನಿಗೆ ಮಂಗಳಾರತಿ ಸಲ್ಲಿಸಲಾಗಿದೆ. ಕೃಷ್ಣಕಟ್ಟೆಯ ಅಕ್ಕಪಕ್ಕದಲ್ಲಿ ಸ್ಥಳದ ಅಭಾವವಿದ್ದರು ಭಕ್ತರ ಬೇಡಿಕೆಗೆ ಮಣಿದ ದೇವಸ್ಥಾನದ ಆಡಳಿತ ಮಂಡಳಿ 'ಕೃಷ್ಣಕಟ್ಟೆ'ಯಲ್ಲಿಯೇ ಕೃಷ್ಣನ ಮೂರ್ತಿಯನ್ನಿಟ್ಟು ಮಂಗಳಾರತಿಯನ್ನು ಆರ್ಚಕರು ನೆರವೆರಿಸಿದ್ದಾರೆ. ಅದರೆ ಮುಂದಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ 'ಕೃಷ್ಣಕಟ್ಟೆ'ಯಲ್ಲಿಯೇ ಎಲ್ಲಾ ಪೂಜಾ ವಿಧಾನಗಳು ನೆರವೆರಬೇಕು ಎಂಬುದು ಭಕ್ತರ ಕೋರಿಕೆಯಾಗಿದೆ.
ಕಳೆದ ವರ್ಷವೂ ಸಣ್ಣ ಅವಘಡ, ಈ ವರ್ಷವೂ ಮತ್ತೇ ಅವಘಡ:
ಕೃಷ್ಣ ವೇಷಾಧಾರಿಯೂ ನಗರದಲ್ಲಿ ನೇತು ಹಾಕಿರುವ ಮಡಿಕೆಗಳನ್ನು ಹೊಡೆಯುತ್ತ ಮುಂದೆ ಸಾಗುವುದು ವಾಡಿಕೆ. ಈ ರೀತಿ ಸಾಗುತ್ತಿರುವಾಗ ಎದುರುಗಡೆ ನೇತು ಹಾಕಿರುವ ಮಡಿಕೆಗಳನ್ನು ಹೊಡೆಯುತ್ತಿರುವಾಗ ಕೈಗೆ ಬಲವಾದ ವಸ್ತುವೊಂದು ತಾಗಿ ರಕ್ತ ಸ್ರಾವವಾದ ಘಟನೆ ಕಳೆದ ವರ್ಷ ನಡೆದಿತ್ತು, ಈ ವರ್ಷವೂ ಅದೇ ಜಾಗದಲ್ಲಿ ಕೃಷ್ಣ ವೇಷಧಾರಿಗೆ ಕಾಲು ಸೆಳೆತ ಉಂಟಾಗಿ ಸುಮಾರು ಒಂದೂವರೆ ಗಂಟೆಗಳ ಕಾಯುವಿಕೆಯ ಬಳಿಕವೂ ಸುಧಾರಿಸದ ಪರಿಣಾಮ ಆರ್ಚಕರೇ ಮಡಿಕೆಗಳನ್ನು ಹೊಡೆಯುವ ಮೂಲಕ ಸಂಪ್ರದಾಯಿಕವಾಗಿ ಕಾರ್ಯಕ್ರಮವನ್ನು ಮುಗಿಸಲಾಯಿತು.
ಕಳೆದ ಬಾರಿ ಹಾಗೂ ಈ ಬಾರಿ ಅದೇ ಜಾಗದಲ್ಲಿ ಇಂತಹ ಘಟನೆಗಳು ನಡೆದಿರುವುದು ಅಚ್ಚರಿ ಮೂಡಿಸಿದ್ದು,ಭಕ್ತಾದಿಗಳಲ್ಲಿ ಗೊಂದಲ ಮೂಡಿಸಿದೆ. ಪರಿಸರದ ಯಾವುದೋ ಒಂದು ಘಟನೆಗೆ ದೇವ ಶಕುನ ಎಂದು ಜನಸಾಮಾನ್ಯರು ಆಡಿಕೊಳ್ಳುತ್ತಿದ್ದಾರೆ.
0 Comments