ಮೂಡಬಿದ್ರೆ: ಬೆದ್ರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೯ನೇ ವರ್ಷದ ಸಂಭ್ರಮದ ಮೊಸರು ಕುಡಿಕೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂಧರ್ಭದಲ್ಲಿ ಕೃಷ್ಣ ಜನ್ಮಾಷ್ಟಮಿಯ ಮರುದಿನ ಕೃಷ್ಣ ಹಾಗೂ ಯಶೋಧೆಯ ಉತ್ಸವ ಮೂರ್ತಿ ಪೇಟೆಗೆ ಆಗಮಿಸುವುದು ನಡೆದು ಬಂದ ವಾಡಿಕೆ. ಶತಮಾನಗಳ ಹಿಂದೆ ನಿರ್ಮಿತವಾಗಿದ್ದ ಕೃಷ್ಣಕಟ್ಟೆಯಲ್ಲಿ ಪೇಟೆಗೆ ಆಗಮಿಸುವ ಕೃಷ್ಣನ ಮೂರ್ತಿಯನ್ನು ಇಟ್ಟು ಪೂಜೆ ನಡೆಸುವ ಸಂಪ್ರಾದಾಯವಿತ್ತು ಅದರೆ ಕಳೆದ ಒಂದೂವರೆ ದಶಕದಿಂದ ಈ ಪದ್ದತಿ ದೂರವಾಗಿ ಕೃಷ್ಣಕಟ್ಟೆಯ ಬದಿಯಲ್ಲಿ ಒಂದು ಕೃತಕ ಜಾಗವನ್ನು ನಿರ್ಮಾಣ ಮಾಡಿ ಪೂಜೆ ನಡೆಸಲಾಗುತಿತ್ತು. ಅದರೆ ಇದಕ್ಕೆ ಭಕ್ತ ಸಮೂಹ ಬೇಸರ ವ್ಯಕ್ತಪಡಿಸಿತ್ತು. ಕೃಷ್ಣನಿಗಾಗಿ ಮೀಸಲಿರುವ ಕೃಷ್ಣ ಕಟ್ಟೆಯಲ್ಲಿಯೇ ಪೂಜೆ ನಡೆಯಬೇಕು ಎಂಬ ಕೂಗೂ ಜೋರಾದ ಬೆನ್ನಲ್ಲೇ ಈ ಬಾರಿಯಿಂದ ಕೃಷ್ಣಕಟ್ಟೆಯಲ್ಲಿಯೇ ಪೂಜೆ ಮಾಡಲು ನಿರ್ಧಾರಿಸಲಾಗಿದೆ.
ಈ ಬಗ್ಗೆ ದೇವಸ್ಥಾನದ ಆಡಳಿತ ಮೊಕ್ತೇಸರರು ಮಾಹಿತಿ ನೀಡಿದ್ದು ಕೃಷ್ಣಕಟ್ಟೆಯನ್ನು ಸ್ವಚ್ಚಗೊಳಿಸಲು ಸೂಚಿಸಲಾಗಿದೆ ಹಾಗೂ ಈ ಬಾರಿ ಕಟ್ಟೆಯಲ್ಲಿಯೇ ಕೃಷ್ಣನ ಮೂರ್ತಿಯನ್ನಿಟ್ಟು ಪೂಜೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಮೂಲಕ ದಶಕಗಳಿಂದ ಕೇಳಿಬರುತ್ತಿದ್ದ ಬೇಡಿಕೆಗೆ ಸ್ಪಂದಿಸಿದ ದೇವಸ್ಥಾನದ ಆಡಳಿತ ಮಂಡಳಿಗೆ ಜನತೆ ಮೆಚ್ಚುಗೆ ಸೂಚಿಸಿದ್ದಾರೆ. ಮೂಲ ಕಟ್ಟೆಯಲ್ಲಿ ಕುಳಿತಿರುವ ಕೃಷ್ಣನ ವೈಭೋಗವನ್ನು ಕಣ್ತುಂಬಿಕೊಳ್ಳಬಹುದು ಎಂದು ಜನತೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಕೃಷ್ಣ ಕಟ್ಟೆಯ ಬದಿಯಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಆಯೋಜಕರ ವೇದಿಕೆ ಸಿದ್ದವಾಗಿದ್ದು ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಜನತೆಯೇ ತೀರ್ಮಾನಿಸಬೇಕಿದೆ.
0 Comments