ಮೂಡಬಿದ್ರೆ: ಜವನೆರ್ ಬೆದ್ರ ಸಂಘಟನೆ(ರಿ) ನೇತೃತ್ವದಲ್ಲಿ ನಡೆಯುತ್ತಿರುವ 'ಕದಂಬ ವನ' ಅಭಿಯಾನದ ಮತ್ತೊಂದು ಭಾಗವಾಗಿ ದಿನಾಂಕ 06-07-2025 ರ ಅದಿತ್ಯವಾರದಂದು ಮೂಡಬಿದ್ರೆ ಕಲ್ಲಬೆಟ್ಟು ಮಹಾಮಾಯಿ ದೇವಸ್ಥಾನದಲ್ಲಿ 5 ಗಿಡಗಳನ್ನು, ಕಾಯರ್ ಗುಂಡಿ ಉಚ್ಚಂಗಿ ಭೈರವ ಕಟ್ಟೆ ಬಳಿ 1 ಗಿಡ ಹಾಗೂ ಚಾಮುಂಡಿ ಬೆಟ್ಟದಲ್ಲಿ ಒಂದು ಕದಂಬ ಗಿಡವನ್ನು ನೆಡಲಾಯಿತು.
ಮರಗಳನ್ನು ನೆಟ್ಟು ಪೋಷಿಸಿದರೆ ನಮಗೆ ಬೇಕಾದ ಶುದ್ದ ಗಾಳಿ ಲಭ್ಯವಾಗುತ್ತದೆ. ಅಧುನಿಕತೆಯ ಹೆಸರಿನಲ್ಲಿ ಮರಗಳ ನಾಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ವಾತವರಣ ಪರಿಶುದ್ದವಾಗಿರಲು ಮರಗಳನ್ನು ನೆಟ್ಟು ಪೋಷಿಸಿ ಪರಿಸರವನ್ನು ರಕ್ಷಿಸೋಣ
0 Comments