ಜವನೆರ್ ಬೆದ್ರ ಕೃಷ್ಣೋತ್ಸವಕ್ಕೆ Big Boss, ಕಾಂತಾರ ಖ್ಯಾತಿಯ ನಟ ಶೈನ್ ಶೆಟ್ಟಿ.!

ಮೂಡಬಿದ್ರೆ: ಮೂಡಬಿದ್ರೆಯ ಇತಿಹಾಸ ಪ್ರಸಿದ್ದ ಗೋಪಾಲಕೃಷ್ಣ ದೇವಸ್ಥಾನದ 109ನೇ ವರ್ಷದ ಮೊಸರು ಕುಡಿಕೆ ಉತ್ಸವ ಇದೇ ಆಗಸ್ಟ್ ೧೬ರಂದು ನಡೆಯಲಿದೆ. ಈ ಪ್ರಯುಕ್ತ ಜವನೆರ್ ಬೆದ್ರ ಸಂಘಟನೆ ಪ್ರಾಯೋಜಿತ ಕೃಷ್ಟೋತ್ಸವ ಕಾರ್ಯಕ್ರಮಕ್ಕೆ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಹಾಗೂ ಕಾಂತಾರ ಖ್ಯಾತಿಯ ನಟ ಶೈನ್ ಶೆಟ್ಟಿ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿದ್ದಾರೆ. ಜವನೆರ್ ಬೆದ್ರ ಫೌಂಡೇಶನ್ ನಡೆಸಿಕೊಡುವ ಕೃಷ್ಣೋತ್ಸವ ಕಾರ್ಯಕ್ರಮಕ್ಕೆ ಶೈನ್ ಶೆಟ್ಟಿ ಅತಿಥಿಯಾಗಿ ಆಗಮಿಸುವುದಾಗಿ ಸ್ವತಃ ಶೈನ್ ಶೆಟ್ಟಿ ಹೇಳಿದ್ದಾರೆ. 

ಜವನೆರ್ ಬೆದ್ರ ಫೌಂಡೇಶನ್(ರಿ) ನ ಸ್ಥಾಪಕಾಧ್ಯಕ್ಷರಾದ  ಅಮರ್ ಕೋಟೆ ಆತ್ಮಿಯ ಆಹ್ವಾನ ನೀಡಿದ್ದಾರೆ. ಈ ಸಂಧರ್ಭದಲ್ಲಿ ಫೌಂಡೇಶನ್ ನ ಕಾರ್ಯದರ್ಶಿಗಳಾದ ಗುರುಪ್ರಸಾದ್ ಪೂಜಾರಿ ಹಾಜರಿದ್ದರು. ಸಂಘಟನೆಯವರು ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ಆಗಮಿಸುವುದು ನನ್ನ ಸೌಭಾಗ್ಯ ಎಂದು ವಿಡಿಯೋ ಮುಖಾಂತರ ಹೇಳಿದ್ದಾರೆ. ಒಟ್ಟಾರೆಯಾಗಿ ಕೃಷ್ಣೋತ್ಸವ ಕಾರ್ಯಕ್ರಮಕ್ಕೆ ಸ್ಟಾರ್ ಗಳ ಆಗಮನದ ಮೂಲಕ ಮತ್ತಷ್ಟು ರಂಗು ಬರಲಿದೆ.



Post a Comment

0 Comments