ವಿಶ್ವ ಪತ್ರಿಕಾ ದಿನದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ನಿಂದ ಕನ್ನಡ ಖಾಸಗಿ ಸುದ್ದಿ ವಾಹಿನಿ News 1stನ ನಿರೂಪಕ ವಾಸುದೇವ್ ಭಟ್ ಗೆ ಸನ್ಮಾನ

ಮೂಡಬಿದಿರೆ: ಮೂಡಬಿದ್ರೆ ಪರಿಸರದ ಪ್ರಮುಖ ಸಂಘಟನೆಗಳಲ್ಲಿ ಒಂದಾದ ಜವನೆರ್ ಬೆದ್ರ ಫೌಂಡೇಶನ್(ರಿ) ನಿಂದ 'ವಿಶ್ವ ಪತ್ರಿಕಾ ದಿನ'ದ ಪ್ರಯುಕ್ತ ಕನ್ನಡದ ಖಾಸಗಿ ಸುದ್ದಿವಾಹಿನಿ News 1st ನಲ್ಲಿ ನಿರೂಪಕನಾಗಿ ಕಾರ್ಯನಿರ್ವಹಿಸುತ್ತಿರುವ ವಾಸುದೇವ್ ಭಟ್ ಗೆ ಸನ್ಮಾನ ಮಾಡಲಾಯಿತು.


ಈ ಸನ್ಮಾನ ಕಾರ್ಯಕ್ರಮದಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ)ನ ಸ್ಥಾಪಕಾಧ್ಯಕ್ಷರದ ಅಮರ್ ಕೋಟೆ, ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ನಾಯಕ್, ಯುವ ಸಂಘಟನೆಯ ಸಂಚಾಲಕ ನಾರಯಣ ಪಡುಮಲೆ, ಯುವ ಸಂಘಟನೆಯ ಸಹ ಸಂಚಾಲಕ ರಾಜೇಶ್ ಕೆಲ್ಲಪುತ್ತಿಗೆ, ರಕ್ತನಿಧಿ ಸಂಚಾಲಕ ಮನು, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments