ಮೂಡಬಿದ್ರೆಯ ಜೈನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಮೂಡುಬಿದಿರೆ: ಜೈನ ಪದವಿಪೂರ್ವ ಕಾಲೇಜು ಮೂಡುಬಿದಿರೆ ಇದರ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ  ನೆರವೇರಿತು.ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಗೌರವಾನ್ವಿತ ಸಂಚಾಲಕರಾದ ಶ್ರೀಯುತ ಕೆ.ಹೇಮರಾಜ್ ವಹಿಸಿದ್ದರು. ಉದ್ಘಾಟಕರಾಗಿ ಆಗಮಿಸಿದ ಡಾ | ಮಾಧವ ಎಮ್.ಕೆ . ಮುಖ್ಯಸ್ಥರು ಕನ್ನಡ ವಿಭಾಗ ಹಾಗೂ ಸಂಯೋಜಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ಇವರು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಜೀವನದಲ್ಲಿಒಳ್ಳೆಯ ಸಂಸ್ಕಾರ, ಒಂದು ಗುರಿಯನ್ನು ಇಟ್ಟುಕೊಂಡು, ಕಠಿಣ ಪರಿಶ್ರಮ ಪಡುತ್ತಾ ಇಷ್ಡಪಟ್ಟು ಓದಿದರೆ ಯಶಸ್ಸು ಖಂಡಿತ ಸಾಧ್ಯ. ಎಷ್ಟೇ ಶ್ರೀಮಂತರಿರಲಿ ಎಷ್ಟೇ ಬಡವರಿರಲಿ ಎಲ್ಲರಿಗೂ ಇರುವ ದಿನದ ಸಮಯ ಒಂದೇ. ವಿದ್ಯಾರ್ಥಿಗಳು ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಶ್ರಮ ಪಡಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ | ಪ್ರಭಾತ್ ಬಲ್ನಾಡು ಇವರು ವಿದ್ಯಾರ್ಥಿ ಸಂಘದ ಪದಾದಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.


ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚರಣ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಪರಿಚಯಿಸಿದರು. ದಿಗಂಬರ ಜೈನ ವಿದ್ಯಾವರ್ಧಕ ಸಂಘದ ವತಿಯಿಂದ 2024-25 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಘದ ಸಂಚಾಲಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷರೂ ಆಗಿರುವ ಶ್ರೀ ಕೆ ಹೇಮರಾಜ್ ಇವರು ಅಭಿನಂದಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಮಾತುಗಳನ್ನು ಆಡಿದರು. 

ವಿದ್ಯಾರ್ಥಿ ಸಂಘದ ಮಾರ್ಗದರ್ಶಕ ಉಪನ್ಯಾಸಕರಾದ ಶ್ರೀ. ಶ್ರೀರಾಮಚಂದ್ರ ಭಟ್ ಇವರು ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಸಂಘದ ಅಧ್ಯಕ್ಷ  ದೀಕ್ಷಿತ್ ಟಿ.ಜಿ  ಸರ್ವರನ್ನೂ ಸ್ವಾಗತಿಸಿದರು, ಕಾರ್ಯದರ್ಶಿ  ಕು.  ಸಿಲ್ವಿಯಾ ಡಿ.ಸೋಜ ವಂದಿಸಿದರು. ಸಾಹಿತ್ಯ ಮತ್ತು ಲಲಿತ ಕಲಾ ಸಂಘದ ಕಾರ್ಯದರ್ಶಿ ಶ್ರವಣ್ ಶೆಟ್ಟಿ ಹಾಗೂ ಜೊತೆ ಕಾರ್ಯದರ್ಶಿ ಕು. ಸಾನಿಕಾ ಆಳ್ವ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments