ಯುವ ವಾಹಿನಿ(ರಿ) ಕುಪ್ಪೆಪದವು-ಎಡಪದವು ಘಟಕದ ಪದಗ್ರಹಣ ಸಮಾರಂಭ

ಯುವವಾಹಿನಿ (ರಿ) ಕುಪ್ಪೆಪದವು ಎಡಪದವು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕುಪ್ಪೆಪದವು  ಅನoತ್ರಾಜ  ಸಭಾಭವನದಲ್ಲಿ ನಡೆಯಿತು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಜಯರಾಮ ಪೂಜಾರಿ ಅವರು ಕೆಲವು ಸಂಘ ಸಂಸ್ಥೆಗಳು  ಪ್ರಾರಂಭಗೊಂಡು, ಒಂದು ಎರಡು ವರ್ಷಗಳಲ್ಲಿಯೇ ಕೊನೆಗೊಳ್ಳುವ ಈ ಕಾಲಘಟ್ಟದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿಯೊಂದಿಗೆ ಸುಮಾರು ಮೂವತ್ತೈದು ಘಟಕಗಳನ್ನು ಹೊಂದಿರುವ  ಬೃಹತ್ ಸಂಸ್ಥೆಯಾಗಿ ವಿವಿಧ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿರುವ ಯುವವಾಹಿನಿ ಸಂಸ್ಥೆಯು  ಕುಪ್ಪೆಪದವು  ಘಟಕವು ಎಡಪದವು ಪರಿಸರಕ್ಕೂ ವಿಸ್ತರಿಸಿದ ವಿಷಯವು ತುಂಬಾ ಸಂತೋಷ ಎನಿಸಿದೆ  ಯುವವಾಹಿನಿಯ ಯಾವುದೇ ಕಾರ್ಯಕ್ರಮ ನಡೆಸುವುದಕ್ಕೆ ಎಡಪದವು  ನಾರಾಯಣ  ಗುರು  ಸಭಾಭವನ ಮುಕ್ತವಾಗಿರುತ್ತದೆ ಎಂದರು. 

ಈ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ(ರಿ) ಕುಪ್ಪೆಪದವು ಎಡಪದವು  ಘಟಕದ ಅಧ್ಯಕ್ಷರಾದ ಶ್ರೀ  ಆಕ್ಷಿತ್ ಕುಮಾರ್ ಅವರು ವಹಿಸಿಕೊಂಡು  ಕಳೆದ ಒಂದು ವರ್ಷದ ಅವಧಿಗೆ  ನನಗೆ ಒಳ್ಳೆಯ ಕಾರ್ಯಕ್ರಮ  ನಡೆಸುವುದಕ್ಕೆ ಸಹಕರಿಸಿದ ಎಲ್ಲಾ ಯುವವಾಹಿನಿ  ಸದಸ್ಯರಿಗೂ   ಕೃತಜ್ಞತೆ ತಿಳಿಸಿದರು,    ಶ್ರೀಮತಿ ಸೌಮ್ಯ ಕೋಟ್ಯಾನ್ ಅವರು   ನೂತನ ಪದಾಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸಿ  ಅಧ್ಯಕ್ಷರಾಗಿ ಶ್ರೀ  ಶ್ರೀಧರ್ ಪೂಜಾರಿ,  ಕಾರ್ಯದರ್ಶಿ ಆಗಿ ಶ್ರೀಮತಿ ಅಕ್ಷತಾ ಉಪಾಧ್ಯಕ್ಷರಾಗಿ  ಶ್ರೀ ಗೋಪಾಲ ಪೂಜಾರಿ( ಗಂಗಾಧರ್)  ಕೋಶಾಧಿಕಾರಿಯಾಗಿ ಶ್ರೀಮತಿ ರಜನಿ ಕುಂದರ್ ಹಾಗು ವಿವಿಧ ನಿರ್ದೇಶಕರನ್ನು ಆಯ್ಕೆ ಮಾಡಿದರು, ಇವರಿಗೆ  ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕೇಶ್ ಕೋಟ್ಯಾನ್ ಅವರು  ಪ್ರತಿಜ್ಞಾವಿಧಿ ನೆರವೇರಿಸಿಕೊಟ್ಟು, ಕಳೆದ  ಮೂವತ್ತೇಳು ವರ್ಷಗಳಿಂದ  ಮೂವತ್ತೈದು ಘಟಕಗಳನ್ನು ಹೊಂದಿರುವ ನಮ್ಮ ಸಂಸ್ಥೆಯು  ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯೋದ್ದೇಶದೊಂದಿಗೆ, ಸಮಾಜಕ್ಕೆ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ,  ಅದರಲ್ಲಿ ಕುಪ್ಪೆಪದವು ಎಡಪದವು ಘಟಕವು  ಹಲವಾರು ಸಮಾಜಮುಖಿ ಕಾರ್ಯ ನಡೆಸಿಕೊಂಡು ಬಂದಿರುತ್ತದೆ,  ಇಂಥಾ ಕಾರ್ಯವು ಇನ್ನಷ್ಟು ನಡೆಯುವಂತಾಗಲಿ ಎಂದರು.


ಈ ಕಾರ್ಯಕ್ರಮದಲ್ಲಿ  ವಿವಿಧ ಕ್ಷೇತ್ರದಲ್ಲಿ  ಸಾಧನೆ ಮಾಡಿರುವ ನಿವೃತ್ತ ಶಿಕ್ಷಕಿ ಶ್ರೀಮತಿ ವಿಜಯಮ್ಮ ಕುಪ್ಪೆಪದವು, ಆರೋಗ್ಯ ಕೇಂದ್ರದ ನಿವೃತ್ತ ನೆೌಕರ ಶ್ರೀ ಚಂದ್ರಶೇಖರ ಬಡಗಬೆಳ್ಳೂರು, ಮತ್ತು ನೃತ್ಯಗಾರ್ತಿ ಕುಮಾರಿ ಸಾಕ್ಷ ಎಡಪದವು  ಇವರುಗಳಿಗೆ   ಗೌರವಾರ್ಪಣೆ  ಹಾಗೂ ಎಸ್ ಎಸ್ ಎಲ್ ಸಿ   ಮತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ಆರು ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ನೀಡಿ  ಪ್ರೋತ್ಸಾಯಿಸಲಾಯಿತು, ಯುವವಾಹಿನಿ ಕುಪ್ಪೆಪದವು ಎಡಪದವು  ಘಟಕಕ್ಕೆ  ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಷ್ಮಾ ಹಾಗು ಎಡಪದವು ಗ್ರಾಮ ಪಂಚಾಯತ್  ಉಪಾಧ್ಯಕ್ಷರಾದ ಶ್ರೀ ಗೋಪಾಲ ಪೂಜಾರಿ ಸಹಿತ ಮೂವತ್ತಾರು   ಮಂದಿ  ಯುವವಾಹಿನಿ ನೂತನ ಸದಸ್ಯತ್ವ ಪಡೆದುಕೊಂಡರು, ಈ ಕಾರ್ಯಕ್ರಮಕ್ಕೆ ಶ್ರೀ ಅಜಯ್  ಅಮೀನ್  ಎಲ್ಲರನ್ನೂ ಸ್ವಾಗತಿಸಿದರು ಶ್ರೀ ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ರೇಣುಕಾ ವರದಿ ಮಂಡಿಸಿದರು,  ಕುಮಾರಿ ದನ್ಯಶ್ರೀ,ಹಾಗು ಕುಮಾರಿ ಬಿಂದ್ಯ ಅವರು ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಅಕ್ಷತಾ ಎಲ್ಲರಿಗೂ ಧನ್ಯವಾದ ಅರ್ಪಿಸಿದರು, ಕಾರ್ಯಕ್ರಮದಲ್ಲಿ  ಅತಿಥಿಗಳಾಗಿ, ಶ್ರೀ ಸಂಜೀವ ಪೂಜಾರಿ, ಶ್ರೀಭರತ್  ಕೆಂಜಾರು, ಶ್ರೀ ಸೋಮಶೇಖರ್ ಕೋಟ್ಯಾನ್ ಇರುವೈಲು, ಹಾಗೂ ಘಟಕದ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು, ವಿವಿಧ ಘಟಕಗಳ  ಸದಸ್ಯರುಗಳು,  ಉಪಸ್ಥಿತಿ ಇದ್ದರು


Post a Comment

0 Comments