೧೮ ವರ್ಷಗಳ ಸತತ ಹೋರಾಟದ ಬಳಿಕ ಆರ್.ಸಿ.ಬಿ ತಂಡ ಪಂಜಾಬ್ ತಂಡವನ್ನು ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿ ಕಪ್ ತನ್ನ ಮುಡಿಗೆರಿಸಿಕೊಂಡಿದೆ. ಕಪ್ ಗೆದ್ದ ಬಳಿಕ ತವರು ರಾಜ್ಯ ಕರ್ನಾಟಕಕ್ಕೆ ಆಗಮಿಸಿ ಆಭಿಮಾನಿಗಳಿಗೆ ಗೆಲುವನ್ನು ಸಮರ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ಆಗಮಿಸಿದ ತಂಡದ ಸದಸ್ಯರು ಬೆಂಗಳೂರಿನಲ್ಲಿ ಮೆಗಾ ರ್ಯಾಲಿಯನ್ನು ನಡೆಸಲು ಸಿದ್ದತೆ ನಡೆಸಲಾಗಿತ್ತು ಅದರೆ ಅಂತಿಮ ಹಂತದಲ್ಲಿ ಅನುಮತಿಯನ್ನು ನಿರಾಕಸಲಾಗಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧಾರಿಸಲಾಯಿತು.
೧೮ ವರ್ಷಗಳ ಬಳಿಕ ಗೆದ್ದ ತಂಡಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ಲಕ್ಷಾಂತರ ಆಭಿಮಾನಿಗಳು ಸ್ಟೇಡಿಯಂಗೆ ಜಮಾಯಿಸಿದ್ದ ಪರಿಣಾಮ ಪರಿಸ್ಥಿತಿ ಕೈ ಮಿರಿದ್ದು ಐದಕ್ಕೂ ಅಧಿಕ ಜನರು ಸಾವನಪ್ಪಿದ್ದು, ಆನೇಕರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗುತ್ತಿದೆ. ಗೆಲುವಿನ ಸಂಭ್ರಮದಲ್ಲಿದ್ದ ಆಭಿಮಾನಿಗಳಿಗೆ ಸೂತಕದ ಛಾಯೆ ಮೂಡಿದಂತಾಗಿದೆ.
0 Comments