ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರ ಸೂಕ್ತವಾದಂತಹ ತಜ್ಞ ವೈದ್ಯರುಗಳು ಇಲ್ಲದೆ ಇರುವ ವೈದ್ಯರುಗಳ ಮೂಲಕ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಎಲ್ಲ ರೀತಿಯ ಸೌಲಭ್ಯಗಳು ಇಲ್ಲಿ ಇದ್ದು ಕೂಡ ತಜ್ಞ ವೈದ್ಯರುಗಳು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಳಿಗೆ ಮಂಗಳೂರಿನ ಜಿಲ್ಲಾ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ.
ತಜ್ಞ ವೈದ್ಯರ ಕೊರತೆಯಿಂದಾಗಿ ಡೆಂಟಲ್ ಡಾಕ್ಟರ್ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯರು ಆಗಿದ್ದಾರೆ, ಜನರಲ್ ಮೆಡಿಸಿನ್ MBBS ಡಾಕ್ಟರ್ ಅಗತ್ಯವಿದೆ , ಆದುದರಿಂದ ತಕ್ಷಣವೇ ಸೂಕ್ತ ತಜ್ಞ ವೈದ್ಯರುಗಳ ನೇಮಕವನ್ನು ಮಾಡಿ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂತ್ರಿಗಳು, ಹಾಗು ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಕೆ ಪಿ ಸಿ ಸಿ ವಕ್ತಾರ ಪದ್ಮಪ್ರಸಾದ್ ಜೈನ್ ಮನವಿಯನ್ನು ಅರ್ಪಿಸಿದರು.
0 Comments