ಚೊಚ್ಚಲ ಪ್ರಶಸ್ತಿಗಾಗಿ ಗುಜರಾತ್ ನಲ್ಲಿ ಸೆಣಸಲಿರುವ ಬೆಂಗಳೂರು ಹಾಗೂ ಪಂಜಾಬ್ ತಂಡಗಳು

ದೇಶಿ ಕ್ರಿಕೆಟ್ ಲೋಕದ ಮಹಾ ಹಬ್ಬ ಎಂದೇ ಖ್ಯಾತಿ ಪಡೆದಿರುವ ಐಪಿಎಲ್ ಕೊನೆಗೂ ಫೈನಲ್ ಹಂತಕ್ಕೆ ತಲುಪಿದೆ. ಪಾಕಿಸ್ತಾನ ಹಾಗೂ ಭಾರತದ ನಡುವಿನ ಯುದ್ದ ವಾತವರಣದ ಪರಿಣಾಮವಾಗಿ ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಂಡಿದ್ದ ಐಪಿಎಲ್ ಆಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು ಅದರೆ ಮರು ಆರಂಭಗೊಂಡ ಪಂದ್ಯಗಳು ಆಭಿಮಾನಿಗಳಿಗೆ ಮತ್ತಷ್ಟು ಮನರಂಜನೆಯನ್ನು ನೀಡಿದವು. ಸದ್ಯ ಐಪಿಎಲ್ ಫೈನಲ್ ಹಂತಕ್ಕೆ ತಲುಪಿದೆ. ಗುಜರಾತ್ ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ಇಂದು ಅಂದರೆ ೩ ಜೂನ್ ಮಂಗಳವಾರದಂದು ರಾತ್ರಿ ೭.೩೦ಕ್ಕೆ ಸರಿಯಾಗಿ ಪಂದ್ಯ ಆರಂಭಗೊಳ್ಳಲಿದೆ.
ಫೈನಲ್ ಪಂದ್ಯದಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗು ಪಂಜಾಬ್ ತಂಡಗಳು ಸೆಣಸಾಡಲಿದೆ. ಟೂರ್ನಿಯುದ್ದಕ್ಕೂ ಅಧ್ಬುತ ಪ್ರದರ್ಶನವನ್ನು ನೀಡಿರುವ ಎರಡು ತಂಡಗಳು ಪ್ರಶಸ್ತಿಗೆ ಆರ್ಹವಾಗಿದ್ದು ಅಂತಿಮ ಹಂತದಲ್ಲಿ ಯಾರು ಒತ್ತಡವನ್ನು ನಿಯಂತ್ರಿಸಿ ಅತ್ಯುತ್ತಮ ಆಟವಾಡುತ್ತದೆಯೋ ಪ್ರಶಸ್ತಿ ಆ ತಂಡದ ಪಾಲಗಾಲಿದೆ. ಒಟ್ಟಾರೆಯಾಗಿ ಇಂದು ನಡೆಯುವ ಫೈನಲ್ ಪಂದ್ಯವನ್ನು ನೋಡಲು ವಿಶ್ವದ ಎಲ್ಲಾ ಕ್ರಿಕೆಟ್ ಆಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.

Post a Comment

0 Comments