ಸಮಾಜದಲ್ಲಿರುವ ಆಶಕ್ತರ ಉದ್ದಾರಕ್ಕಾಗಿ ಮೊದಲಾಗಿ ಕೆಲಸ ಮಾಡುವ ಮೂಡಬಿದ್ರೆಯ "ಜವನೆರ್ ಬೆದ್ರ" ಫೌಂಡೇಶನ್ ಪ್ರತಿವರ್ಷದಂತೆ ಈ ವರ್ಷವೂ ಮಹಾರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಇದೇ ಜೂನ್ ೬ ರ ಶುಕ್ರವಾರದಂದು ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ಮ ೧.೦೦ ಗಂಟೆಯವರೆಗೆ ನಡೆಯಲಿದೆ.
ಮಾತೃ ಸಂಸ್ಥೆ ಜವನೆರ್ ಬೆದ್ರ ಫೌಂಡೇಶನ್ ನೇತೃತ್ವದ ಜೊತೆಗೆ ಜವನೆರ್ ಬೆದ್ರ ರಕ್ತ ನಿಧಿ, ಅಬ್ಬಕ್ಕ ಬ್ರಿಗೇಡ್ ಹಾಗೂ ಜವನೆರ್ ಬೆದ್ರ ಯುವಸಂಘಟನೆಯ ಜೊತೆಗೂಡಿ ಈ ಲೋಕ ಕಲ್ಯಾಣ ಕಾರ್ಯಕ್ರಮವನ್ನು ನಡೆಸಲು ನಿರ್ಧಾರಿಸಿದೆ. ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ ಅಸ್ಪತ್ರೆ ಹಾಗೂ ಮೂಡಬಿದ್ರೆಯ ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಯ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಪುಣ್ಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತವನ್ನು ಬಯಸುವುದರ ಜೊತೆಗೆ ಇದರ ಸದೋಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ 9741826999 | 9483101759 | 8197351078
0 Comments