ಧರ್ಮ ಸಿದ್ದಾಂತದ ಬಗ್ಗೆ ದೊಡ್ಡದಾಗಿ ಮಾತನಾಡುವ ಪ್ರತಿಯೊಬ್ಬರು ಈ ಕಾರ್ಯವನ್ನು ಮೊದಲು ಮಾಡಿ

ಉತ್ತರದಿ ಹಿಮಾಲಯವೇ ಕಿರೀಟ ಪ್ರಾಯವಾಗಿ, ದಕ್ಷಿಣದಿ ಪಾದಸ್ಪರ್ಶಿಸುವ ಪುನೀತ ಸಮುದ್ರಗಳಿಂದ ಆವೃತವಾಗಿರುವ, ಈ ಪುಣ್ಯಭೂಮಿ ಭಾರತ ಆರ್ಯವರ್ತ ಎಂಬುದಾಗಿ ಕರೆಯಲ್ಪಡುತ್ತಿದೆ. ಈ ಭಾರತದ ಪ್ರತಿಷ್ಠೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕೃತ ಇವೆರಡು ಅತ್ಯಮೂಲ್ಯವಾದ ಆಸ್ತಿ ವೇದಕಾಲದಿಂದಲೂ ಭಾರತೀಯ ಆಚಾರ -ವಿಚಾರ -ಸಂಸ್ಕೃತಿ ಗುರುಕುಲ ಶಿಕ್ಷಣ ಪದ್ಧತಿ, ಸ್ವಾಧ್ಯಾಯ ಇವೆಲ್ಲ ಅದೆಷ್ಟೋ ಸಿದ್ಧಿ ಪುರುಷರ, ಮಹಾತ್ಮರ, ದಾರ್ಶನಿಕರ ಪಾಲಿಗೆ ಅಮೃತ ಸ್ವರೂಪವಾಗಿತ್ತು. ಹೀಗಿರುವಾಗ ಅದೆಷ್ಟೋ ಮಂದಿ ವಿದೇಶಿಯರು ಈ ಸಂಸ್ಕೃತಿಯ- ಸಂಸ್ಕೃತದ ಸೊಗಡನ್ನು ಆತ್ಮಾವಲೋಕನ ಮಾಡಿಕೊಂಡು, ಅಧ್ಯಯನ ಮಾಡಲು ನಮ್ಮ ದೇಶಕ್ಕೆ ಆಕರ್ಷಿತರಾಗಿರುವುದು ಅವರ ಪುಣ್ಯಭಾಗವೆಂದು ಭಾವಿಸುತ್ತಾರೆ. ಹೀಗಿರುವಾಗ ನಮ್ಮ ಭಾರತೀಯರ ಶೋಚನೀಯ ಸಂಗತಿ ಎಂದರೆ ನಾವು ಹಾಗೂ ನಮ್ಮ ಈಗಿನ ಪೀಳಿಗೆ ಪಾಶ್ಚಾತ್ಯದ ಕಡೆಗೆ ಜೊತೆಗೆ ಆಧುನಿಕರಣಕ್ಕೆ ಮಾರುಹೋಗುತ್ತಿದೆ. 

ವಿದ್ಯಾರ್ಥಿಗಳಲ್ಲಿ ಮೌಲ್ಯ ಶಿಕ್ಷಣ ಆಚಾರ -ವಿಚಾರಗಳು ಬದಲಾಗುತ್ತಿದೆ. ಸಂಬಂಧಗಳ ಗೌರವ ಮಹತ್ವವೆ ಕಳೆದುಕೊಂಡಿದೆ .ಇದಕ್ಕೆಲ್ಲ ಕಾರಣ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾದ ವೇದ, ವೇದಾಂತ, ಪುರಾಣಗಳ ,ಧರ್ಮ ಗ್ರಂಥಗಳ ಸಾಮಾನ್ಯ ಸ್ಪರ್ಶಜ್ಞಾನವೇ ಇಲ್ಲದಿರುವುದು .ಕೊನೆಯ ಪಕ್ಷ ನಮ್ಮ ಮಕ್ಕಳಿಗೆ ಈ ಎಲ್ಲ ಸಂಸ್ಕೃತಿ ಅಡಗಿರುವ ಸಂಸ್ಕೃತ ಭಾಷೆಯನ್ನು ಕಲಿಸುವ ಅಥವಾ ಶಾಲೆಯಲ್ಲಿ ಕಲಿಯಲು ಅವಕಾಶವಿದ್ದರೂ ಪೋಷಕರು ಪ್ರೋತ್ಸಾಹಿಸದೆ ಇರುವುದು. ಈ ಕಾರಣದಿಂದ ಹಿಂದೆ ಇದ್ದ ಮಾನವೀಯ ಮೌಲ್ಯ  ಮಾತೃದೇವೋಭವ, ಪಿತೃದೇವೋ ಭವ,ಆಚಾರ್ಯ ದೇವೋಭವ ,ಅತಿಥಿ ದೇವೋಭವ,ವಸುದೈವಕುಟುಂಬಕಮ್, ಮೊದಲಾದ ಮಾತುಗಳು ಜ್ಞಾನ ಗ್ರಂಥಗಳಲ್ಲೇ ಉಳಿದುಬಿಟ್ಟಿದೆ.

ವಿಕಸಿತ ಜ್ಞಾನ ಸಂಕುಚಿತವಾಗಿದೆ ಆತ್ಮಶಕ್ತಿ ಕ್ಷೀಣಿಸುತ್ತಿದೆ. ಜೀವನ ಎದುರಿಸುವ ಶಕ್ತಿ ಕುಂಠಿತವಾಗಿದೆ. ಬಂಧುಗಳೇ ನಾವೆಲ್ಲ ಒಮ್ಮೆ ಈ ಕುರಿತಾಗಿ ಯೋಚಿಸೋಣ, ಕನಿಷ್ಠ ಪಕ್ಷ ನಮ್ಮ ಮಕ್ಕಳಿಗೆ ಈ ಸಂಸ್ಕೃತಿಯ ಪ್ರತಿಕವಾದ ಸಂಸ್ಕೃತ ಭಾಷೆಯನ್ನು ಕಲಿಯಲು ಇರುವ  ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ. ನಮ್ಮ ಮೂಡಬಿದ್ರೆಯಲ್ಲಿ ಸಂಸ್ಕೃತ  ಉಚಿತ ಹಾಗೂ ಮುಕ್ತವಾಗಿ ಕಲಿಯಲು ಅವಕಾಶವಿದೆ. ಬಿಡುವಿನ ಸಮಯದಲ್ಲಾದರೂ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಕನಿಷ್ಠ ಜ್ಞಾನವನ್ನು ಪಡೆಯಲು ಈ ಸಂಸ್ಕೃತವ ಭಾಷೆಯನ್ನು ಕಲಿಸುವ ಹೊಸ ಸಂಕಲ್ಪವನ್ನು ಸ್ವೀಕರಿಸೋಣ.

ನಮ್ಮ ಸಂಸ್ಕೃತಿಯ ಮೂಲ ಬೇರುಗಳಲ್ಲಿ ಒಂದಾದ 'ಸಂಸ್ಕೃತ' ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಪ್ರತಿಯೊಬ್ಬರು ತಮ್ಮ ಮುಂದಿನ ಪೀಳಿಗೆಗೆ 'ಸಂಸ್ಕೃತ' ಅಧ್ಯಯನವನ್ನು ಮಾಡಲು ಉತ್ತೇಜಿಸುವ ಕೆಲಸ ಅತ್ಯಗತ್ಯವಾಗಿದೆ ಅದ್ದರಿಂದ ನಿಮ್ಮ ಸುತ್ತ ಮುತ್ತಲಿರುವ 'ಸಂಸ್ಕೃತ' ಶಾಲೆಯ ಬಗ್ಗೆ ವಿಚಾರಿಸಿ ಅಲ್ಲಿ 'ಸಂಸ್ಕೃತ' ಅಧ್ಯಯನಕ್ಕೆ ಸೇರಿಕೊಳ್ಳಿ.

ಮೂಡಬಿದ್ರೆ ಪರಿಸರದ ಜನತೆಗೆ ಇಲ್ಲಿದೆ ಸುವರ್ಣಾವಕಾಶ ಕೂಡಲೇ ಸಂಪರ್ಕಿಸಿ

ಶ್ರೀ ನಾಗಲಿಂಗ  ಸ್ವಾಮಿ ಸಂಸ್ಕೃತ  ಪಾಠಶಾಲೆ ಮೂಡಬಿದರೆ.(R.V.S Sabha(R) Manglore)

------------------------------------------------------------------------------

ಸಂಸ್ಕೃತ ಭಾಷೆ ಕಲಿಯಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳಿಗೆ 

ಉಚಿತ ಹಾಗೂ ಮುಕ್ತ ಸುವರ್ಣಾವಕಾಶ. ನಮ್ಮ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ರಾಮಾಯಣ ,ಮಹಾಭಾರತ, ಪುರಾಣ ,ನೀತಿಶತಕ ,ಅಮರಕೋಷ, ಸಂಸ್ಕೃತ ಸಂಭಾಷಣೆ ಜ್ಞಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9845893667


Post a Comment

0 Comments