ಮಂಗಳೂರಿನ ನೀರುಮಾರ್ಗದ ಕೆಲ್ರಾಯದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕಲಿಯುಗದ ಕಾಮಧೇನು ಎಂದು ಕರೆಯುವ ಗೋ ಮಾತೆಗೆ ವಿಷವುಣಿಸಿರುವ ಘಟನೆಯೊಂದು ನಡೆದಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ ಆರು ಗೋವುಗಳಿಗೆ ವಿಷವುಣಿಸಿರುವ ಘೋರ ದುರಂತ ನಡೆದಿದೆ. ಪ್ರಕಾಶ್ ಎನ್ನುವವರ ಮನೆಯ ದನಗಳಿಗೆ ಯಾರೋ ಪಾಪಿಗಳು ಈ ರೀತಿಯ ಹೀನಾ ಕೃತ್ಯ ನಡೆಸಿರುವ ಶಂಕೆ ಕಂಡು ಬಂದಿದೆ.
ಸುಮಾರು ಐವತ್ತು ವರ್ಷಗಳಿಂದ ಗೋವುಗಳನ್ನು ಸಾಕುತ್ತಿರುವ ಪ್ರಕಾಶ್ ಅವರ ಕುಟುಂಬ ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದು ಇವರ ಬಳಿ ಸುಮಾರು ೩೫ಕ್ಕೂ ಅಧಿಕ ಗೋವುಗಳಿದ್ದು ಅವುಗಳ ಪೈಕಿ ಆರು ಗೋವುಗಳಿಗೆ ವಿಷ ನೀಡಿರುವ ಶಂಕೆಯನ್ನು ಪ್ರಕಾಶ್ ಅವರು ವ್ಯಕ್ತಪಡಿಸಿದ್ದಾರೆ. ಹುಲ್ಲು ಮೇಯಲು ಎಂದು ಹಟ್ಟಿಯಿಂದ ಹೊರಗೆ ಬಿಟ್ಟಿರುವ ಸಂಧರ್ಭದಲ್ಲಿ ವಿಷವುಣಿಸಿರುವ ಶಂಕೆ ಇದ್ದು, ಈಗಾಗಲೇ ಕೆಲವು ದನಗಳು ಸತ್ತಿದ್ದು ಇನ್ನು ಕೆಲವು ಜೀವನ್ಮಾರಣದ ಹೋರಾಟವನ್ನು ನಡೆಸುತ್ತಿದೆ. ಈ ಬಗ್ಗೆ ಗೋವುಗಳ ದೇಹದೊಳಗಿನ ಅಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು. ಈ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ತಮ್ಮ ನೋವನ್ನು ತೊಡಿಕೊಂಡಿದ್ದಾರೆ.

0 Comments