ಕೊನೆಗೂ ಇರಾನ್ ಮೇಲೆ ದಾಳಿಗೆ ಇಳಿದ ಅಮೇರಿಕಾ.! ನಡೆಯುತ್ತಾ ಭೀಕರ ಯುದ್ದ.?

ಅಮೆರಿಕ ಸೇನೆ ಇರಾನ್‌ನ ಮೂರು ಅಣು ಸೈಟ್‌ಗಳ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ರಾತ್ರಿ ಘೋಷಿಸಿದ್ದಾರೆ. ಇರಾನ್ ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಅಣುಸೈಟ್ ಗಳ ಮೇಲೆ ದಾಳಿ ನಡೆಸಿದೆ. ಪರ್ವತ ಪ್ರದೇಶದಲ್ಲಿರುವ ಫೋರ್ಡೋ ಸೌಲಭ್ಯ ಮತ್ತು ನಟಾಂಜ್‌ನ ಉರೆನಿಯಂ ಸಂವರ್ಧನೆ ಕೇಂದ್ರದ ಮೇಲೆ ದಾಳಿಯಾಗಿದ್ದು ಇದು ಇರಾನ್ ನ ಪ್ರಮುಖ ಅಣುಸ್ಥಾವರ ಕೇಂದ್ರಗಳಾಗಿವೆ.

ಭಾನುವಾರ ಮಾಧ್ಯಮ ಪ್ರಕಟಣೆಯಲ್ಲಿ, ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದಂತೆ, ಶಾಂತಿ ಸ್ಥಾಪನೆಯಾಗದಿದ್ದಾರೆ ಅಮೆರಿಕ ಇತರ ಸ್ಥಳಗಳನ್ನು ಗುರಿಯಾಗಿಸಬಹುದು ಎಂದರು. “ಇದು ಶಾಂತಿಯಾಗಬಹುದು ಅಥವಾ ಇರಾನ್‌ಗಾಗಿ ದುರಂತವಾಗಬಹುದು” ಎಂದು ಹೇಳಿದರು. ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ “ಒಂದು ತಂಡವಾಗಿ ಕೆಲಸ ಮಾಡಿದ್ದೇನೆ” ಎಂದು ಹೇಳಿದರು.

ಅಮೇರಿಕಾ ದಾಳಿಯ ಬಗ್ಗೆ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಅಮೆರಿಕ ದಾಳಿಗಳನ್ನು ವಿಶ್ವಸಂಸ್ಥೆಯ ಅಡಿಯಲ್ಲಿ ಗಂಭೀರ ಉಲ್ಲಂಘನೆ ಎಂದು ಖಂಡಿಸಿದರು. ಅಂತಾರಾಷ್ಟ್ರೀಯ ಕಾನೂನು ಮತ್ತು ಅಣು ನಿಷೇಧ ಒಪ್ಪಂದಗಳ ವಿರುದ್ಧ ಈ ದಾಳಿ ನಡೆದಿದ್ದು, ಇದರ “ದೀರ್ಘಕಾಲಿಕ ಪರಿಣಾಮಗಳು” ಇರುತ್ತವೆ ಎಂದು ಎಚ್ಚರಿಸಿದರು. ಇರಾನ್ ತನ್ನ ಸ್ವಾಯತ್ತತೆ, ಹಿತಾಸಕ್ತಿಗಳು ಮತ್ತು ಜನರ ರಕ್ಷಣೆಗೆ ವಿಶ್ವಸಂಸ್ಥೆ ಚಟುವಟಿಕೆ ಹಕ್ಕು ನೀಡಿದ ಎಲ್ಲಾ ಆಯ್ಕೆಗಳನ್ನು ಕಾಯ್ದುಕೊಳ್ಳುತ್ತದೆ ಎಂದರು.

ಅಮೆರಿಕ ಯಾವ ಬಾಂಬ್‌ಗಳನ್ನು ಬಳಸಿತು: ಶನಿವಾರದ ದಾಳಿಯಲ್ಲಿ ಅಮೆರಿಕದ ಬಿ-2 ಸ್ಟೆಲ್ತ್ ಬಾಂಬರ್‌ಗಳನ್ನು ಬಳಸಲಾಗಿದೆ ಎಂದು ಅಧ್ಯಕ್ಷ ಟ್ರಂಪ್ CNN ಗೆ ದೃಢಪಡಿಸಿದರು. ಈ ಬಾಂಬರ್‌ಗಳು GBU-57 ಮಾಸಿವ್ ಒರ್ಡನನ್ಸ್ ಪೆನೆಟ್ರೇಟರ್ (ಬಂಕರ್ ಬಸ್ಟರ್) ಬಾಂಬ್‌ಗಳನ್ನು ಹಾರಿಸಿದವು. ಈ ಬಾಂಬ್‌ಗಳಲ್ಲಿ ಸ್ಫೋಟಕ ಶಕ್ತಿಯುಳ್ಳ ಹೆಡ್ಡ್ ಇರುತ್ತದೆ ಮತ್ತು ಭೂಮಿಯಿಂದ ಸುಮಾರು 200 ಅಡಿ (61 ಮೀಟರ್) ಆಳಕ್ಕೆ ತಲುಪಿ ಸ್ಫೋಟಿಸಬಲ್ಲದು. ಅನೇಕ ಬಾಂಬ್‌ಗಳನ್ನು ಕ್ರಮವಾಗಿ ಬಿಡುವುದರಿಂದ ಇನ್ನೂ ಆಳಕ್ಕೆ ಹೊಡೆಯುವ” ಶಕ್ತಿಯು ದೊರೆಯುತ್ತದೆ. B-2 ವಿಮಾನವೇ ಈ GBU-57A/B ಬಾಂಬ್‌ಗಳನ್ನು ಸಾಗಿಸುವ ಸಾಮರ್ಥ್ಯವಿರುವ ಏಕೈಕ ವಿಮಾನವಾಗಿದೆ.


Post a Comment

0 Comments