ಮಂಗಳೂರು: ವಿಧಾನಸಭೆಗಳಲ್ಲಿ ಸ್ಪೀಕರ್ ಹಾಗೂ ಕರಾವಳಿಯ ಶಾಸಕರು ತುಳು ಮಾತನಾಡುವ ಈ ಸಮಯದಲ್ಲಿ ದಕ್ಷಿಣ ಕನ್ನಡದ ಗ್ರಾಮಗಳಲ್ಲಿ ನಡೆಯುವ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುಳು ಭಾಷೆಯನ್ನು ಬಳಸಬಾರದು ಎಂಬ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಈ ಸಂಬಂಧ ಪತ್ರವೊಂದು ಸಾಮಾಜೀಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ವೈರಲ್ ಅದ ಪತ್ರಕ್ಕೆ ತುಳುನಾಡಿನ ಜನತೆ ಭಾರೀ ವಿರೋಧ ವ್ಯಕ್ತಪಡಿಸಿದರು. ಮಾಜಿ ಸಚಿವರುಗಳು ಹಾಗೂ ಕೆಲ ಸಂಸದರುಗಳು ಇದಕ್ಕೆ ಸಂಬಂಧ ಪಟ್ಟಂತೆ ಬೇಸರ ವ್ಯಕ್ತಪಡಿಸಿದರು. ಯಾರೋ ಒಬ್ಬ ವ್ಯಕ್ತಿ ಈ ಬಗ್ಗೆ ಪತ್ರ ಬರೆದಿದ್ದ ಕಾರಣಕ್ಕೆ ಇದನ್ನು ಆದೇಶವಾಗಿ ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದರ ಬಗ್ಗೆ ಪ್ರಶ್ನೆಗಳು ಬರಲು ಆರಂಭವಾಯಿತು. ಸದ್ಯ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ವೈರಲ್ ಆದ ಪತ್ರಕ್ಕೆ ಯಾವುದೇ ಮನ್ನಣೆ ಇಲ್ಲ ಅಂತಹ ಆದೇಶ ಹೊರಡಿಸಲಾಗಿಲ್ಲ ಎಂಬ ಆಧಿಕೃತ ಮಾಹಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ ಇಲಾಖೆ ಪತ್ರದ ಮೂಲಕ ತಿಳಿಸಿದೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇಲಾಖೆ ಎಲ್ಲಾ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಆದೇಶವನ್ನು ಪತ್ರದ ಮೂಲಕ ಹೊರಡಿಸಿದೆ.

0 Comments