ಪ್ರಧಾನಿ ನರೇಂದ್ರ ಮೋದಿ ಖಡಕ್ ವಾರ್ನಿಂಗ್ ಬಳಿಕ ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್

ಅಮೇರಿಕಾ: ಭಾರತದ ಪ್ರಜೆಗಳ ಮೇಲೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕ್ ಪೋಷಿತ ಭ'ಯೋ'ತ್ವಾದಕರು ನಡೆಸಿದ ಅಮಾನವೀಯ ದಾಳಿಗೆ ಪ್ರತಿಯಾಗಿ ಭಾರತ ಸೇನೆ ಪಾಕಿಸ್ತಾನದ ಉ-ಗ್ರ-ರಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ನೀಡಿತು. ಉ-ಗ್ರ-ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದ ಸೇನೆ ಭೀಕರ ದಾಳಿಯನ್ನು ನಡೆಸಿತು. ಭಾರತದ ದಾಳಿಗೆ ತತ್ತರಿಸಿದ ಪಾಕಿಸ್ತಾನ ಈ ದಾಳಿಯನ್ನು ಇಲ್ಲಿಗೆ ಕೊನೆಗೊಳಿಸಿ 'ಕದನ ವಿರಾಮ'ಕ್ಕೆ ಒಪ್ಪಿಗೆ ನೀಡುವಂತೆ ಅಂಗಲಾಚಿ ಕೇಳಿಕೊಂಡಿತು. ಇದಕ್ಕೆ ಭಾರತ ಸಹಮತ ವ್ಯಕ್ತಪಡಿಸಿ ಎರಡೂ ರಾಷ್ಟ್ರಗಳ ಉನ್ನತ ಸೇನಾ ನಾಯಕರ ನೇತೃತ್ವದಲ್ಲಿ 'ಕದನ ವಿರಾಮ'ಕ್ಕೆ ಒಪ್ಪಿಗೆ ನೀಡಲಾಯಿತು.

ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ ಕೆಲವು ಗಂಟೆಗಳ ಬಳಿಕ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕದನ ವಿರಾಮದ ಸಂಧಾನ ನಡೆಸಿದ್ದು ನಾನೇ ಎಂದು ಬಡಾಯಿ ಕೊಚ್ಚಿಕೊಂಡರು. ಭಾರತ ನನ್ನ ಮಾತನ್ನು ಕೇಳಿ ಈ ನಿರ್ಧಾರಕ್ಕೆ ಬಂದಿದೆ ಎಂದು ಉತ್ತರ ಕುಮಾರನಂತೆ ಪೌರುಷ ತೋರಿಸಿ ಕ್ರೆಡಿಟ್ ಪಡೆಯಲು ಮುಂದಾದರು. ಇದು ಹಲವಾರು ರೀತಿಯ ಚರ್ಚೆಗೆ ಗ್ರಸವಾಯಿತು.

ಡೊನಾಲ್ಡ್ ಟ್ರಂಪ್ ನ ಆ ಬಳಿಕ ಹಲವಾರು ಬಾರಿ ಇದೇ ಮಾತನ್ನು ಪುನರುಚ್ಚಿಸಿದರು. ಜಿ-೭ ರಾಷ್ಟ್ರಗಳ ಸಭೆಗೆ ತೆರಳಿದ್ದ ಸಂಧರ್ಭದಲ್ಲಿ ಮೋದಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ದೂರವಾಣಿಯ ಮೂಲಕ ಮಾತನಾಡಿ ನಮಗೆ ಯಾರ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ. ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಖಡಕ್ ಹೇಳಿಕೆ ನೀಡಿದ್ದರು.

ಮೋದಿಯ ವಾರ್ನಿಂಗ್ ಬಳಿಕ ಉಲ್ಟಾ ಹೊಡೆದ ಟ್ರಂಪ್:

ಮೋದಿಯವರು ಅಮೇರಿಕಾ ಅಧ್ಯಕ್ಷರಿಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಮೂರನೇ ವ್ಯಕ್ತಿಯ ಅವಶ್ಯಕತೆಯಿಲ್ಲ ಎಂದು ಹೇಳಿದ ಬಳಿಕ ಡೊನಾಲ್ಡ್ ಟ್ರಂಪ್ ಉಲ್ಟಾ ಹೊಡೆದಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವೆ 'ಕದನ ವಿರಾಮ' ನಡೆಯಲು ನಾವು ಕಾರಣವಲ್ಲ ಎಂದು ಹೇಳುವ ಮೂಲಕ ಟ್ರಂಪ್ ಮತ್ತೊಮ್ಮೆ ನಗೆಪಾಟಲಿಗೆ ಒಳಗಾಗಿದ್ದಾರೆ.


Post a Comment

0 Comments