ಜೀವನದಲ್ಲಿ ಗಳಿಸಿದ್ದರಲ್ಲಿ ಒಂದು ಪಾಲನ್ನು ದಾನ ನೀಡಿ ಖುಷಿಯನ್ನು ಕಾಣಬೇಕು ಎಂಬ ಮಾತಿದೆ. ಈ ಮಾತಿನ ಪ್ರಕಾರ ಬದುಕಿ ಬಾಳುವವರು ತುಂಬಾ ಕಡಿಮೆ. ಅದರೆ ಇಲ್ಲೊಬ್ಬರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಮೇಲಿನ ಆಭಿಮಾನದಿಂದ ತಾನು ಗಳಿಸಿದ ಒಂದು ಭಾಗವನ್ನು ಶಾಲೆಯೊಂದಕ್ಕೆ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಸರಕಾರಿ ಉನ್ನತೀಕೃತ ಹಿರಿಯ ಪ್ರಾರ್ಥಮಿಕ ಶಾಲೆ ಬೊಳಿಯ ಇಲ್ಲಿಗೆ ದಿನಾಂಕ 18/06/2025 ರ ಬುಧವಾರದಂದು ಗ್ರಂಥಾಲಯಕ್ಕೆ ರೂ. 50,000/- ಮೌಲ್ಯದ ಪುಸ್ತಕ ಹಾಗೂ ಕಪಾಟು ಸಮರ್ಪಣಾ ಸಮಾರಂಭ ಜರುಗಿತು.
ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ವಿಜಯಲಕ್ಷ್ಮೀ ಮೇಗಿನಮನೆ ಕೊಳವೂರು ಇವರು ತನ್ನ ಹುಟ್ಟೂರಿನ ಶಾಲೆಗೆ ಪುಸ್ತಕಗಳನ್ನು ಉಚಿತವಾಗಿ ಶಾಲೆಗೆ ನೀಡಿದರು. ಅವರಿಗೆ ಶಾಲಾವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾಗಿರುವ ಶ್ರೀ ಗಂಗಾಧರ,ಮುತ್ತೂರು ಗ್ರಾ ಪಂ ಸದಸ್ಯರಾಗಿರುವ ಶ್ರೀಮತಿ ಪುಷ್ಪಾ ನಾಯ್ಕ್ ,ಪಲ್ಗುಣಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಸಂದೀಪ್ ಆಳ್ವ, ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಳದ ಟ್ರಸ್ಟಿ ಶ್ರೀ ಭವಾನಂದ ಶೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸಿತರಿದ್ದರು. ಮುಖ್ಯ ಶಿಕ್ಷಕಿ ಜಯಲಕ್ಷ್ಮೀಯವರು ಸ್ವಾಗತಿಸಿ,ಸಹ ಶಿಕ್ಷಕ ನಾಗೇಶ್ ನಾಯ್ಕ್ ವಂದಿಸಿದರು.ಸಹ ಶಿಕ್ಷಕ.ಶಂಕರ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
0 Comments