ಲಕ್ಷಾಂತರ ಜನರು ಭೇಟಿ ಕೊಡುತ್ತಿರುವ ಲಿಂಗ ಸ್ವರೂಪದಲ್ಲಿ ನೆಲೆಸಿರುವ ಶಿವನ ಸ್ಥಾನವಾದ 'ಕೊಟ್ಟಿಯೂರು' ದೇವಸ್ಥಾನದ ಕೌತುಕದ ಸತ್ಯಗಳನ್ನು ಒಮ್ಮೆ ತಿಳಿಯಿರಿ.!

"ಕೊಟ್ಟಿಯೂರು" ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿಯಾಗುತ್ತಿರುವ ಈ ಕ್ಷೇತ್ರ ಯಾವುದು.? ಇಲ್ಲಿನ ಹಿನ್ನಲೇ ಏನು.? ಇಲ್ಲಿ ಭೇಟಿ ಕೊಡುವವರು ತಿಳಿದುಕೊಳ್ಳಬೇಕಾದ ಪ್ರಮುಖ ಪ್ರಮುಖ ಅಂಶಗಳು ಯಾವುದು ಎಂಬುದರ ಬಗ್ಗೆ ನಾವು ಇಂದು ತಿಳಿದುಕೊಳ್ಳೋಣ. 'ಕೊಟ್ಟಿಯೂರು' ಇದು ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಒಂದು ಗ್ರಾಮ. ಈ ಗ್ರಾಮದಲ್ಲಿ 'ಇಕ್ಕಾರೆ ಕೊಟ್ಟಿಯೂರು' ಎಂಬ ಪುರಾತನ ಶಿವ ದೇವಾಲಯವಿದೆ. "ವಡಕ್ಕೆಶ್ವರಂ" ಎಂಬುದು ಈ ದೇವಾಲಯದ ಪುರಾತನ ಹೆಸರು. ಅದರೆ ಇದು 'ಕೊಟ್ಟಿಯೂರು' ಗ್ರಾಮದ ನದಿಯ ತಟದಲ್ಲಿರುವುದರಿಂದ ಇದನ್ನು 'ಇಕ್ಕಾರೆ ಕೊಟ್ಟಿಯೂರು' ಎಂಬ ಹೆಸರಿನಿಂದ ಸ್ಥಳೀಯ ನಿವಾಸಿಗಳು ಗುರುತಿಸುತ್ತಾರೆ.

ಕೊಟ್ಟಿಯೂರು ಗ್ರಾಮದಲ್ಲಿ ವಾವಲ್ಲಿ ಎಂಬ ನದಿಯಿದ್ದು ಈ ನದಿಯ ಪೂರ್ವ ದಂಡೆಯಲ್ಲಿ 'ಕಿಝಕ್ಕೆಶ್ವರಂ' ಅಥವಾ 'ಅಕ್ಕಾರೆ ಕೊಟ್ಟಿಯೂರು' ಎಂಬ ದೇವಸ್ಥಾನವಿದ್ದು ಅದೇ ರೀತಿ ನದಿಯ ಪಶ್ಚಿಮ ದಂಡೆಯಲ್ಲಿ 'ವಡಕ್ಕೆಶ್ವರಂ' ಅಥವಾ 'ಇಕ್ಕಾರೆ ಕೊಟ್ಟಿಯೂರು' ಎಂಬ ಎರಡು ದೇವಸ್ಥಾನಗಳಿವೆ. "ಅಕ್ಕಾರೆ ಕೊಟ್ಟಿಯೂರು" ಎಂಬುದು ಒಂದು ತಾತ್ಕಲೀಕ ದೇವಸ್ಥಾನವಾಗಿದ್ದು ಇದು ವರ್ಷದಲ್ಲಿ ಒಂದು ತಿಂಗಳುಗಳ ಕಾಲ ಮಾತ್ರ ತೆರೆದಿರುತ್ತದೆ. 'ಇಕ್ಕಾರೆ ಕೊಟ್ಟಿಯೂರು' ಇತರ ದೇವಸ್ಥಾನಗಳಂತೆ ವರ್ಷಪೂರ್ತಿ ತೆರೆದಿರುತ್ತದೆ ಅದರೆ 'ಅಕ್ಕಾರೆ ಕೊಟ್ಟಿಯೂರು' ತೆರೆದಿರುವ ಸಮಯದಲ್ಲಿ ಇದರ ಬಾಗಿಲು ಮುಚ್ಚುವುದು ಮತ್ತೊಂದು ವಿಶೇಷ.

'ಅಕ್ಕಾರೆ ಕೊಟ್ಟಿಯೂರು' ದೇವಾಲಯವೂ ದಟ್ಟವಾದ ಕಾಡಿನ ಮಧ್ಯೆ ಇದ್ದು ವೈಶಾಖ ಮಾಸದ ಒಂದು ತಿಂಗಳುಗಳ ಕಾಲ ಮಾತ್ರ ಇದರ ಬಾಗಿಲು ತೆರೆದಿರುತ್ತದೆ. ಈ ದೇವಸ್ಥಾನಕ್ಕೆ ಪುರಾಣದ ಹಿನ್ನಲೆಯಿದ್ದು ಬ್ರಹ್ಮ ದೇವರ ಪುತ್ರರಾದ 'ದಕ್ಷ ಬ್ರಹ್ಮ' ಈ ಜಾಗದಲ್ಲಿ 'ದಕ್ಷ ಯಾಗ' ನಡೆಸಿದ್ದರು ಎಂಬುದು ಪ್ರತೀತಿ.

ಏನಿದು ದಕ್ಷಬ್ರಹ್ಮನ 'ದಕ್ಷಯಾಗ'.?

ಬ್ರಹ್ಮ ದೇವರಿಂದ ನೇರವಾಗಿ ಜನಿಸಿದ ೧೯ ಪ್ರಜಾಪತಿಗಳಲ್ಲಿ ದಕ್ಷಬ್ರಹ್ಮರು ಕೂಡ ಒಬ್ಬರು. ಇವರಿಗೆ ದಾಕ್ಷಾಯಿಣಿ ಎಂಬ ಮಗಳಿದ್ದಳು ಆಕೆ ಸಾಕ್ಷತ್ ಈಶ್ವರನನ್ನೇ ತನ್ನ ಪತಿಯಾಗಿ ಪಡೆದುಕೊಳ್ಳಬೇಕು ಎಂದು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಳು. ಇದು ತಂದೆಯಾದ ದಕ್ಷರಿಗೆ ಇಷ್ಟವಿಲ್ಲದಿದ್ದರು ಮಗಳ ಆಸಗೆ ಆಡ್ಡಿ ಪಡಿಸಲಿಲ್ಲ. ಶಿವನೊಂದಿಗೆ ವಿರೋಧ ಭಾವವನ್ನು ಹೊಂದಿದ್ದ ದಕ್ಷ ಬ್ರಹ್ಮರು ಒಂದು ದಿನ 'ದಕ್ಷಯಾಗ' ಎಂಬ ಮಹಾಯಾಗವನ್ನು ನಡೆಸುತ್ತಾರೆ ಇದಕ್ಕೆ ಶಿವನಿಗೆ ಆಹ್ವಾನ ನೀಡದೆ ದರ್ಪ ಮೆರೆಯುತ್ತಾರೆ.

ದಕ್ಷಯಾಗದಲ್ಲಿಯೇ ಅಗ್ನಿ ಪ್ರವೇಶಿಸಿದ ದಾಕ್ಷಾಯಿಣಿ.!

ತಂದೆಯಾದ ದಕ್ಷಬ್ರಹ್ಮನೂ ತಾನು ನಡೆಸುವ 'ದಕ್ಷಯಾಗ'ಕ್ಕೆ ಮಗಳಿಗೆ ಆಹ್ವಾನ ನೀಡದಿದ್ದರೂ ಶಿವನ ಬಳಿ ಹಠಮಾಡಿ 'ದಕ್ಷಯಾಗ'ದಲ್ಲಿ ಭಾಗವಹಿಸುತ್ತಾಳೆ ಅದರೆ ಸಕಲವೂ ಆಗಿರುವ ತನ್ನ ಪತಿ ಸಾಕ್ಷತ್ ಶಿವನಿಗೆ ಇಲ್ಲಿ ಯಾವುದೇ ಸ್ಥಾನವಿಲ್ಲ ಎಂದು ತಿಳಿದು ನೊಂದು ದಕ್ಷಯಾಗದ ಆಗ್ನಿಯನ್ನು ಪ್ರವೇಶ ಮಾಡಿ ತನ್ನ ಜೀವವನ್ನು ಕಳೆದುಕೊಳ್ಳುತ್ತಾಳೆ. ಈ ವಿಷಯ ತಿಳಿದ ಶಿವನೂ ಕೋಪಗೊಂಡು ತನ್ನ ಜಡೆಯನ್ನು ಬಿಚ್ಚಿ ನೆಲಕ್ಕೆ ಬಡಿದಾಗ ವೀರಭದ್ರನೂ ಅವತಾರ ತಾಳುತ್ತಾನೆ ಆ ಬಳಿಕ ಕೋಪದಿಂದ ವೀರಭದ್ರನೂ ಶಿವ ಗಣಗಳ ಜೊತೆಗೆ ದಕ್ಷ ನಡೆಸುತ್ತಿದ್ದ ಮಹಾಯಾಗದ ಬಳಿ ಬಂದು ದಕ್ಷ ಗಡ್ಡವನ್ನು ಕಿತ್ತು ಕಾಡಿಗೆ ಏಸೆಯುತ್ತಾನೆ ಬಳಿಕ ಖಡ್ಗದಿಂದ ಬ್ರಹ್ಮಪುತ್ರನ ತಲೆಯನ್ನು ಕಡಿದು ಹಾಕುತ್ತಾನೆ. 

'ದಕ್ಷಯಾಗ' ನಡೆದ ಸ್ಥಳವೇ 'ಅಕ್ಕಾರೆ ಕೊಟ್ಟಿಯೂರು':

ಪುರಾಣದಲ್ಲಿ ದಕ್ಷಬ್ರಹ್ಮ ನಡೆಸಿದ 'ದಕ್ಷಯಾಗ'ದ ಸ್ಥಳವೇ ಈ ಅಕ್ಕಾರೆ ಕೊಟ್ಟಿಯೂರು ಎಂಬುದು ಆಸ್ಥಿಕರ ಬಲವಾದ ನಂಬಿಕೆ. ಆ ಕಾರಣದಿಂದ ಇಲ್ಲಿ ಸಾಕ್ಷತ್ ಶಿವ, ಪಾರ್ವತಿ ಹಾಗೂ ವೀರಭದ್ರ ಬಂದು ನೆಲೆಸಿದ್ದಾನೆ ಎಂಬುದು ಪ್ತತೀತಿ. 'ವೈಶಾಖ' ಮಾಸದಲ್ಲಿ ಇಲ್ಲಿ ಮೂರು ಕೃತಕವಾಗಿ ಸ್ಥಳಗಳನ್ನು ನಿರ್ಮಿಸಲಾಗುವುದು ಹಾಗೂ ಅವುಗಳಲ್ಲಿ ಒಂದು ಯಾಗ ಶಾಲೆಯಾಗಿದ್ದು, ಮತ್ತೊಂದು ಯಾಗಕ್ಕೆ ಸಂಬಂಧ ಪಟ್ಟ ನೈವೆಧ್ಯಗಳನ್ನು ನಿರ್ಮಿಸುವ ಸ್ಥಳವಾಗಿದ್ದು ಮೂರನೆಯದ್ದು ಚಾಕರಿ ವರ್ಗಕ್ಕೆ ವಿಶ್ರಾಂತಿ ಪಡೆಯಲು ಇರುವ ಜಾಗವಾಗಿದೆ.

ಎಳ ನೀರು, ಬೆಳ್ಳಿ ಕೊಡಪಾನ ಹಾಗೂ ಸ್ವರ್ಣ ಕೊಡಪಾನ ಇಲ್ಲಿನ ವಿಶೇಷ ಸೇವೆಗಳು:

ಶಿವನೂ ತನ್ನ ಸತಿಯನ್ನು ಕಳೆದುಕೊಂಡಿರುವ ಜಾಗವಾಗಿರುವುದರಿಂದ ತನ್ನ ಪರಿಸ್ಥಿತಿ ಇನ್ನೂ ಯಾರಿಗೂ ಬರಬಾರದು, ಅಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಎಲ್ಲಾರನ್ನೂ ಶಿವನೂ ಇಲ್ಲಿ ಕಾಯುತ್ತನೆ ಎಂಬುದು ನಂಬಿಕೆ. ಅದ್ದರಿಂದ ಇಲ್ಲಿ ವಿವಾಹದ ಸಮಸ್ಯೆ, ಗಂಡ-ಹೆಂಡತಿ ಸಮಸ್ಯೆ, ಸಂತಾನ ಭಾಗ್ಯ ಸಮಸ್ಯೆಗಳಂತಹ ತೊಂದರೆ ಇರುವವರು ಇಲ್ಲಿ ಬಂದು ಶಿವನ ಲಿಂಗಕ್ಕೆ ಎಳ ನೀರು ಸಮರ್ಪನೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂಬುದು ಪ್ರತಿಯೊಬ್ಬ ಭಕ್ತರ ಬಲವಾದ ನಂಬಿಕೆ. ಕಂಕಣ ಭಾಗ್ಯ ಕೂಡಿ ಬರದಿದ್ದಾರೆ ಇಲ್ಲಿ ಬಂದು ಮೊದಲ ವರ್ಷ ಬೆಳ್ಳಿ ಕೊಡಪಾನ ಸಮರ್ಪಣೆ ಮಾಡಿದರೆ ಮುಂದಿನ ವರ್ಷ ಕಲ್ಯಾಣದ ಬಳಿಕ ಸತಿ ಪತಿಗಳು ಬಂದು ಸ್ವರ್ಣ ಕೊಡಪಾನ ಸಮರ್ಪಣೆ ಸೇವೆಯನ್ನು ನೆರವೆರಿಸುವುದು ವಾಡಿಕೆ.

'ಅಕ್ಕಾರೆ ಕೊಟ್ಟಿಯೂರು' ಪುರಾಣ ಐತಿಹ್ಯವಿರುವ ಜಾಗ ಎಂಬುದು ಎಲ್ಲಾರ ನಂಬಿಕೆ. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಈ ಸ್ಥಳ ಮತ್ತಷ್ಟು ಪ್ರಚಾರ ಪಡೆಯುತ್ತಿದೆ. ಲಕ್ಷಾಂತರ ಜನರು ಈ ಸ್ಥಳಕ್ಕೆ ಭೇಟಿ ಕೊಟ್ಟು ಶಿವನ ಆಶೀರ್ವಾದವನ್ನು ಪಡೆಯುತ್ತಿದ್ದಾರೆ. ಕೇರಳ ದೇವಸ್ಥಾನಗಳ ತವರೂರು ಎಂದು ಹೇಳಿದರೆ ತಪ್ಪಾಗಲಾರದು ಅದರೆ ಲಕ್ಷಾಂತರ ಜನರು ಇಲ್ಲಿ ಭೇಟಿ ನೀಡುತ್ತಿರುವುದರಿಂದ ಇಲ್ಲಿನ ಪಾವಿತ್ರತೆ ಹಾಗೂ ಐತಿಹ್ಯಕ್ಕೆ ಯಾವುದೇ ಧಕ್ಕೆ ಬರದಿರಲಿ ಎಂಬುದು ನಮ್ಮ ಕೋರಿಕೆ.


Post a Comment

0 Comments