ಅಹಮದಾಬಾದ್ ನಲ್ಲಿ ಪತನವಾದ ಏರ್ ಇಂಡಿಯಾದಲ್ಲಿ ಮಾಜಿ ಮುಖ್ಯಮಂತ್ರಿಯೂ ಪ್ರಯಾಣ


ಅಹಮದಾಬಾದ್: ಗುಜಾರತ್ ರಾಜ್ಯದ ಅಹಮದಾಬಾದ್ ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿ ಗುಜಾರತ್ ನ ಮಾಜಿ ಮುಖ್ಯಮಂತ್ರಿಯಾದ ವಿಜಯಾ ರೂಪಾನಿಯೂ ಪ್ರಯಾಣಿಸುತ್ತಿದ್ದರು ಎಂದು ಅಧಿಕೃತವಾಗಿ ತಿಳಿದು ಬಂದಿದೆ. ಸರ್ಧಾರ್ ವಲ್ಲಭಬಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ ೨೪೨ ಪ್ರಯಾಣಿಕರಲ್ಲಿ ಗುಜಾರತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಯಿ ಕೂಡ ಬ್ಯುಸಿನೆಸ್ ಕ್ಲಾಸ್ ನ ಸೀಟ್ ನಂಬರ್ ೧೨ರಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ದೇಶದ ಅತೀ ದೊಡ್ಡ ದುರಂತಗಳ ಸಾಲಿಗೆ ಈ ದುರಂತವೂ ಸೇರಲಿದೆ. ಒಂದು ಮಾಹಿತಿಯ ಪ್ರಕಾರ ಪ್ರಯಾಣಿಸುತ್ತಿದ್ದ ಎಲ್ಲಾರೂ ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಏರ್ ಇಂಡಿಯಾ ಬೋಯಿಂಗ್ ೭೮೭ ವಿಮಾನ ಇದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಅತ್ಯಂತ ಭೀಕರ ವಿಮಾನ ದುರಂತವಾಗಿದೆ. ತಾಂತ್ರೀಕ ದೋಷದಿಂದ ವಿಮಾನ ಪತನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಫೈಲೆಟ್ ಅಂತಿಮವಾಗಿ "May Day" ಎಂಬ ಮಾತನ್ನು ATC ರವಾನಿಸಿದ್ದ ಎಂದು ತಿಳಿದು ಬಂದಿದೆ. ಇದರ ಅರ್ಥ ಎಲ್ಲಾವೂ ಕೈ ಮೀರಿ ಹೋಗಿದೆ ಎಂಬುದಾಗಿದೆ.