ಅಹಮದಾಬಾದ್: ಭಾರತ ದೇಶ ಇತ್ತೀಚಿನ ವರ್ಷಗಳಲ್ಲಿ ಕಂಡ ಅತ್ಯಂತ ಭೀಕರ ವಿಮಾನ ದುರಂತಗಳಲ್ಲಿ 12-ಜೂನ್-2025ರಂದು ಗುಜರಾತ್ ನ ಅಹಮದಾಬಾದ್ ನ ಮೇಘಾನಿ ನಗರದಲ್ಲಿ ಸಂಭವಿಸಿದ ದುರ್ಘಟನೆಯೂ ಒಂದು. ದೆಹಲಿಯಿಂದ ಅಹಮದಾಬಾದ್ ಗೆ ಆಗಮಿಸಿ ಅಲ್ಲಿಂದ ನೇರವಾಗಿ ಲಂಡನ್ ಗೆ ತೆರಳಲಿದ್ದ ಏರ್ ಇಂಡಿಯಾ ಬೋಯಿಂಗ್ 787 ವಿಮಾನ 12 ಸಿಬ್ಬಂದಿ ಸಹಿತ 242 ಜನರನ್ನು ಹೊತ್ತು ಲಂಡನ್ ಕಡೆ ಮುಖ ಮಾಡಿತ್ತು ಅದರೆ ಟೆಕ್ ಆಫ್ ಅದ ಕೆಲವೇ ಕ್ಷಣಗಳಲ್ಲಿ ಮೇಘಾನಿ ನಗರದ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ವಿಮಾನ ಸ್ಪೋಟ ಸಂಭವಿಸಿದೆ.
ಈ ವಿಮಾನ ದುರಂತದಲ್ಲಿ 242 ಜನರ ಪೈಕಿ 241 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಒಬ್ಬ ವ್ಯಕ್ತಿ ಪವಾಡದ ರೀತಿಯಲ್ಲಿ ಪಾರಗಿದ್ದಾನೆ. ಅಹಮದಾಬಾದ್ ನ ಈ ದುರಂತಕ್ಕೆ ಇಡೀ ವಿಶ್ವವೇ ಕಂಬನಿ ಮಿಡಿದಿದ್ದು, ಸ್ಥಳಕ್ಕೆ ಭಾರತ ಸರ್ಕಾರದ ಅಧಿಕಾರಿಗಳು ಹಾಗೂ ಮಂತ್ರಿಗಳು ಆಗಮಿಸಿ ಸ್ಥಳ ಪರೀಶಿಲನೆ ನಡೆಸಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ. ವಿಮಾನ ಅಪ್ಪಳಿಸಿದ ಹಾಸ್ಟೆಲ್ ಕ್ಯಾಂಟಿನಲ್ಲಿ ಮಧ್ಯಾಹ್ನದ ಸಮಯ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಊಟ ಮಾಡುತ್ತಿದ್ದು ಅವರುಗಳ ಪೈಕಿ ಸುಮಾರು 20 ವಿದ್ಯಾರ್ಥಿಗಳು ಮೃತಪಟ್ಟಿದ್ದು ಹಾಗೂ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗುಜರಾತ್ ರಾಜ್ಯದ ಅಹಮದಾಬಾದ್ ನ ಮೇಘಾನಿ ನಗರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಅಧಿಕಾರಿಗಳಿಂದ್ ಮಾಹಿತಿ ಪಡೆದುಕೊಂಡು ಅಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಮಾತನಾಡಿಸಲು ಅಸ್ಪತ್ರೆಗೆ ಭೇಟಿಗೆ ತೆರಳಿದ್ದಾರೆ. ಈ ವಿಮಾನ ದುರಂತದಲ್ಲಿ ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯೂ ಮೃತಪಟ್ಟಿದ್ದು ಅವರ ನಿವಾಸಕ್ಕೂ ಮೋದಿ ಭೇಟಿ ನೀಡುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಇಂತಹ ಘಟನೆ ಮುಂದೆಂದಿಗೂ ಸಂಭವಿಸದಿರಲಿ ಹಾಗೂ ಮೃತಪಟ್ಟ ಎಲ್ಲಾರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

0 Comments