ಪಾಕಿಸ್ತಾನದ ಮೇಲೆ ಸುದರ್ಶನ ಚಕ್ರ ಪ್ರಯೋಗಿಸಿದ ಭಾರತ.?

ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ದದ ವಾತಾವರಣ ಕ್ಷಣ ಕ್ಷಣಕ್ಕೂ ಭಯದ ಭೀತಿಯನ್ನು ಉಂಟು ಮಾಡಿದೆ. ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ಪಾಕಿಸ್ತಾನದ ಉಗ್ರ ಸೇನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರಿಂದ ಕೋಪಗೊಂಡಿರುವ ಪಾಕಿಸ್ತಾನ ಸೇನೆ ಕಳೆದ ರಾತ್ರಿ ಭಾರತದ ಮೇಲೆ ಕ್ಷಿಪಣಿ ದಾಳಿಗೆ ಮುಂದಾಗಿತ್ತು ಅದರೆ ಭಾರತದ ಅತ್ಯಾಧುನಿಕ ಕ್ಷಿಪಣಿ ತಡೆ ಡಿಫೆನ್ಸ್ ಸಿಸ್ಟಮ್ ಸ್ವಯಂ ಚಾಲಿತವಾಗಿ ಆಕ್ಟಿವೆಟ್ ಆಗಿ ಪಾಕಿಗಳ ಕ್ಷಿಪಣಿಯನ್ನು ಹೊಡೆದುರುಳಿಸಿತು. 

ಭಾರತದ ಈ ರಕ್ಷಣಾ ವ್ಯವಸ್ಥೆಯ ಎಸ್-೪೦೦ ಯೂ ಸುಮಾರು ೬೦೦ ಕಿ.ಮೀ ದೂರದವರೆಗೆ ಕ್ಷಿಪಣಿಗಳನ್ನು ಪತ್ತೆಹಚ್ಚಬಲ್ಲ ಸಾಮಾರ್ಥ್ಯವನ್ನು ಹೊಂದಿದೆ. ಈ ನಡುವೆ ಭಾರತವೂ ಪಾಕಿಸ್ತಾನದ ಹಲವಾರು ಕಡೆಗಳ ಮೇಲೆ ಡ್ರೋನ್ ದಾಳಿಯನ್ನು ನಡೆಸಿದ್ದು ಕೆಲವು ಡ್ರೋನ್ ಗಳನ್ನು ಪಾಕ್ ಸೇನೆ ಹೊಡೆದುರುಳಿಸಿದೆ ಎಂದು ಪಾಕಿಸ್ತಾನ ತಿಳಿಸಿದೆ. ಭಾರತದ ನಡೆಯ ಬಗ್ಗೆ ಪಾಕ್ ಸೇನೆ ಕುತೂಹಲದಿಂದ ಕಾಯುತ್ತಿದ್ದು ಇನ್ನೂ ಹಲವಾರು ಕಾರ್ಯಚರಣೆಗಳು ನಡೆಯಲಿವೆ ಇದು ಕೇವಲ ಆರಂಭ ಆಷ್ಟೇ ಎಂದು ಭಾರತ ಸರ್ಕಾರ ಇಂದು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ತಿಳಿಸಿದ್ದಾರೆ.


Post a Comment

0 Comments