ಲಾಹೋರ್: ಭಾರತದ ಮೇಲೆ ಪ್ರತಿಕಾರದ ದಾಳಿ ನಡೆಸುತ್ತೇವೆ ಎಂದು ಹೇಳಿಕೊಂಡಿದ್ದ ಪಾಕಿಸ್ತಾನದ ಲಾಹೋರ್ ನಲ್ಲಿ ದೊಡ್ಡ ಮಟ್ಟದ ಸ್ಪೋಟವೊಂದು ನಡೆದಿದೆ ಎಂಬ ಮಾಹಿತಿಗಳು ಪಾಕ್ ಸ್ಥಳೀಯ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಈ ದಾಳಿಯನ್ನು ಪಾಕಿಸ್ತಾನದಲ್ಲಿರುವ ವಿರೋಧಿಗಳು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಪ್ರತ್ಯೇಕವಾದಿಗಳು ಡ್ರೋನ್ ಮೂಲಕ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಾಳಿಯಿಂದ ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದ ಗೊಂದಲ ಉಂಟಾಗಿದ್ದು ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ ಎನ್ನಲಾಗುತ್ತಿದೆ.
ಭಾರತದ ಆಪರೇಷನ್ ಸಿಂಧೂರ್ ಗೆ ತತ್ತರಿಸಿರುವ ಪಾಕಿಸ್ತಾನಕ್ಕೆ ಸದ್ಯ ಅಂತರಿಕ ದಾಳಿಯ ಬಿಸಿ ಮುಟ್ಟಿದೆ ಎಂದು ಹೇಳಬಹುದು. ಉಗ್ರರರನ್ನು ಪೋಷಿಸುವ ಮೂಲಕ ಇತರ ದೇಶಗಳಲ್ಲಿ ಭಯ ಹುಟ್ಟಿಸುತ್ತಿದ್ದ ಪಾಕಿಸ್ತಾನಕ್ಕೆ ಸದ್ಯ ಭಯದ ವಾತವರಣ ನಿರ್ಮಾಣವಾಗಿದೆ. ಭಾರತದ ಸೇನೆಯ ಒಂದು ದಾಳಿಗೆ ಪಾಕ್ ವಿಲವಿಲ ಒದ್ದಾಡುತ್ತಿದೆ.

0 Comments