ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಗಾಣದಕೊಟ್ಯ ನಿವಾಸಿ ಪೂವಪ್ಪ ಸಪಲ್ಯ ದಿನಾಂಕ ೦೬-೦೫-೨೦೨೫ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಶ್ರೀಯುತರು ಜಿಲ್ಲೆಯ ಶ್ರೇಷ್ಠ ಕೊಂಬು ವಾದಕರ ಸಾಲಿನಲ್ಲಿ ಪ್ರಮುಖರು. ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಆಶೀರ್ವಾದದಿಂದ ಸರಿ ಸುಮಾರು ೫೦ ವರ್ಷಗಳ ಕಾಲ ಕೊಂಬು ವಾದನದ ಸೇವೆಯನ್ನು ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ನಿರ್ವಹಿಸಿರುತ್ತಾರೆ.
ಪೂವಪ್ಪ ಸಪಲ್ಯರವರ ವಿಶಿಷ್ಟ ವಾದನ ಶೈಲಿಗೆ ದೈವರಾಧನ ಕ್ಷೇತ್ರದಲ್ಲಿ 'ಅನಂತಾಡಿ ಕೊಂಬು' ಎಂಬ ಪದನಾಮವಿತ್ತು ಹಾಗೂ ಶ್ರೀಯುತರು ಕಂಬಳ ಕೂಟದಲ್ಲಿಯು ಕೊಂಬು ವಾದನ ಮಾಡುತ್ತಿದ್ದು ಇದಕ್ಕೆ 'ಕಂಕನಾಡಿ ಕೊಂಬು' ಎಂಬ ಪದನಾಮದಿಂದ ಖ್ಯಾತರಾಗಿದ್ದರು. ಮೃತರು ಪತ್ನಿ ಹಾಗೂ ಒರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರಿಗೆ ಆ ದೈವ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
0 Comments