'ಆಪರೇಷನ್ ಸಿಂಧೂರ್' ಕುರಿತು ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರತಿಕ್ರಿಯೆ.?

ಏಪ್ರಿಲ್ ೨೨, ೨೦೨೫ ರಂದು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಹಿಂದೂಗಳ ನರಮೇ'ದಕ್ಕೆ ಭಾರತ ೧೫ ದಿನಗಳ ಬಳಿಕ ತಕ್ಕ ಪ್ರತ್ರ್ಯುತ್ತರ ನೀಡಿದೆ. ಭಾರತೀಯರ 'ಸಿಂಧೂರ'ವನ್ನು ಆಳಿಸಲು ಪ್ರಯತ್ನಿಸಿದ ಪಾಕಿಸ್ತಾನದ ಉಗ್ರ ಸಂಘಟನೆಗೆ ಸರಿಯಾದ ಏಟು ಕೊಟ್ಟಿದೆ. "ಆಪರೇಷನ್ ಸಿಂಧೂರ್" ಹೆಸರಿನಲ್ಲಿ ಮುಂಜಾನೆ ೧.೪೫ ಸುಮಾರಿಗೆ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತೀಯ ಸೇನೆ ಏರ್ ಸ್ಟ್ರೈಕ್ ದಾಳಿಯನ್ನು ಮಾಡಿದೆ. ದಾಳಿಯಲ್ಲಿ ೯ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದು ಆನೇಕ ಉಗ್ರರು ಸಾವನಪ್ಪಿದ್ದಾರೆ. ಭಾರತದ "ಆಪರೇಷನ್ ಸಿಂಧೂರ್" ಬಗ್ಗೆ ಈ ವಿಶ್ವದ್ಯಾಂತ ಚರ್ಚೆಯಾಗುತ್ತಿದ್ದು, ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂಬ ತಕ್ಕ ಉತ್ತರವನ್ನು ಭಾರತ ವಿಶ್ವಕ್ಕೆ ನೀಡಿದೆ.

ಭಾರತದ ಈ ಏರ್ ಸ್ಟ್ರೈಕ್ ಬಗ್ಗೆ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾತನಾಡಿದ್ದು ಇದು ಒಂದು ನಾಚಿಕೆಗೇಡಿನ ಸಂಗತಿ ಎಂದು ಪ್ರತ್ರಿಕ್ರಿಯಿಸುವ ಮೂಲಕ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ್ದಾರೆ ಮಾತ್ರವಲ್ಲದೆ ಇದನ್ನು ಅದಷ್ಟು ಬೇಗ ಮುಗಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಭಾರತದ ಶಕ್ತಿಯ ಬಗ್ಗೆ ಹೊಗಳಿಯ ಮಾತುಗಳನ್ನಾಡಿದ್ದಾರೆ.

ಭಾರತ ದೇಶ ಶಾಂತಿ ಪ್ರಿಯ ರಾಷ್ಟ್ರ ಎಂಬುದು ಇಡೀ ಜಗತ್ತಿಗೆ ತಿಳಿದಿದ ಅದರೆ ನಮ್ಮ ಮೇಲೆ ಸುಖಾಸುಮ್ಮನೆ ದಾಳಿಯನ್ನು ಮಾಡಿ ನಮ್ಮನ್ನು ಕೆಣಕಿದರೆ ಚರಿತ್ರೆಯಲ್ಲಿ ಎದ್ದು ಬರದಂತೆ ಆಗದ ರೀತಿಯಲ್ಲಿ ಉತ್ತರವನ್ನು ಕೊಟ್ಟೆ ಕೋಡುತ್ತೇವೆ ಎಂದು  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಮತ್ತೊಮ್ಮೆ ಸಾಭೀತುಪಡಿಸಿದೆ.


Post a Comment

0 Comments