ಮತ್ತೊಂದು ಸಾಧನೆಯ ಶಿಖರ ಏರಿದ ಪ್ರಧಾನಿ ನರೇಂದ್ರ ಮೋದಿ.! ಸಾಲು ಸಾಲು ಸವಾಲುಗಳಲ್ಲಿ ಗೆದ್ದ ವಿಶ್ವನಾಯಕ

ನರೇಂದ್ರ ಮೋದಿ ಈ ಹೆಸರು ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿದ ಯುಗ ಪುರುಷ ಎಂದರೆ ತಪ್ಪಾಗಲಾರದು. ಸಾಲು ಸಾಲು ಸವಾಲುಗಳ ಮಧ್ಯೆ ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ಹೊಸ ಸಾಧನೆಯನ್ನು ಮಾಡಿ ವಿಶ್ವನಾಯಕ ಎಂದು ಕರೆಸಿಕೊಂಡ ನರೇಂದ್ರ ಮೋದಿ ಈಗ ಮತ್ತೊಂದು ಹೊಸ ಸಾಧನೆಯ ಶಿಖರವನ್ನು ಏರಿದ್ದಾರೆ. ಸ್ವಾತಂತ್ರ್ಯದ ಬಳಿಕ ಗೊಂದಲಮಯವಾಗಿದ್ದ ಹಲವಾರು ಕಾನೂನುಗಳನ್ನು ಮೋದಿ ಈಗ ಸರಿಪಡಿಸುತ್ತಿದ್ದಾರೆ. ದುರ್ಬಲರಿಗೆ ಸಿಗಬೇಕಿದ್ದ ನೆರವನ್ನು ಪ್ರಬಲ ವಶಪಡಿಸಿಕೊಳ್ಳುತ್ತಿದ್ದರು ಇದನ್ನು ತೊಡೆದು ಹಾಕಲು ಮೋದಿ ಪಣ ತೊಟ್ಟಿದ್ದು ಅದಕ್ಕಾಗಿ ಹಗಲು ರಾತ್ರಿ ಶ್ರಮ ಪಡುತ್ತಿದ್ದಾರೆ.

ಮೋದಿಯವರ ಕಾರ್ಯಯೋಜನೆಯ ಮುಂದುವರಿದ ಭಾಗವಾಗಿ ವಕ್ಪ್ ಕಾಯ್ದೆ ತಿದ್ದುಪಡಿ ಮಸೂದೆ ಜಾರಿಗೊಳಿಸುವ ಕುರಿತು ಪ್ರಸ್ತಾಪಿಸಿ, ಹಲವಾರು ಪರ ಹಾಗೂ ವಿರೋಧದ ನಡುವೆ ಈ ಮಸೂದೆಯನ್ನು ಲೋಕಸಭೆಯಲ್ಲಿ ಯಶಸ್ವಿಯಾಗಿ ಮಂಡಿಸಿ, ರಾಜ್ಯಸಭೆಯೆ ಕಳುಹಿಸಿ ಕೊಡಲಾಯಿತು. ಸದ್ಯ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿ ಕೊಡಲಾಗಿದೆ. ಮೋದಿಯವರ ಹಲವಾರು ಕಾರ್ಯಯೋಜನೆಗಳ ಮಧ್ಯೆ ಈ ಮಸೂದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಸದನದಲ್ಲಿ ಮಂಡಿಸಿ ಜಾರಿಗೊಳಿಸಲಾಯಿತು.


Post a Comment

0 Comments