2 ಪಕ್ಷಗಳ ಮೈತ್ರಿ ಹಿನ್ನಲೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ರಾಜೀನಾಮೆ

ತಮಿಳುನಾಡು: ೨೦೨೬ರಲ್ಲಿ ನಡೆಯುವ ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಎಐಡಿಎಂಕೆ ಪಕ್ಷಗಳ ಮೈತ್ರಿ ಹಿನ್ನಲೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಹೈಕಮಾಂಡ್ ಸೂಚನೆಯ ಹಿನ್ನಲೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಕಳೆದ ಕೆಲ ದಿನಗಳ ಹಿನ್ನಲೆ ರಾಜೀನಾಮೆ ನೀಡುವುದು ಖಚಿತ ಎಂಬ ಮಾತುಗಳು ಕೇಳಿ ಬಂದಿದ್ದು ಇಂದು ಅಧಿಕೃತವಾಗಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಮೈತಿ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಅಣ್ಣಾಮಲೈಯವರ ರಾಜೀನಾಮೆ ಅನಿವಾರ್ಯವಾಗಿದ್ದು, ಎಐಡಿಎಂಕೆ ಪಕ್ಷದ ನಾಯಕರು ಕುಪ್ಪುಸ್ವಾಮಿಯವರ ರಾಜೀನಾಮೆ ಪಡೆಯಬೇಕು ಎಂದು ಅಮಿತ್ ಶಾ ಅವರ ಬಳಿ ಮನವಿ ಮಾಡಿದ್ದರು ಈ ಹಿನ್ನಲೆ ಅಣ್ಣಾಮಲೈ ರಾಜೀನಾಮೆಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಭವಿಷ್ಯದಲ್ಲಿ ಅಣ್ಣಾಮಲೈಯವರಿಗೆ ಯಾವ ಹುದ್ದೆಯನ್ನು ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

Post a Comment

0 Comments