ಕಾಸರಗೋಡು ತಾಲೂಕಿನ೦ ಮದ್ದೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ವಿಶೇಷ ಕಾರ್ಯಕ್ರಮ ಕಳೆದ ಹಲವಾರು ದಿನಗಳಿಂದ ಬಾರಿ ವಿಜೃಂಬನೆಯಿಂದ ಸಾಗುತ್ತಿದೆ. ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪತ್ನಿ ಸಮೇತರಾಗಿ ಭಾಗಿಯಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದರು. ದೇವಸ್ಥಾನದ ಇತಿಹಾಸ ಹಾಗೂ ಮಹತ್ವವನ್ನು ದೇವಸ್ಥಾನದ ಪ್ರಮುಖರಿಂದ ಪಡೆದುಕೊಂಡು ಪ್ರದಕ್ಷಿಣೆ ಹಾಗೂ ಶತಮಾನಗಳ ಬಳಿಕ ವಿನಾಯಕನಿಗೆ ನಡೆಯುತ್ತಿರುವ ಮೂಡಪ್ಪ ಸೇವೆಯಲ್ಲಿ ಭಾಗಿಯಾದರು.
ದೇವರ ದರ್ಶನದ ಬಳಿಕ ನಡೆದ ಧರ್ಮಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಬಿಜೆಪಿಯ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಲೋಕಸಭಾ ಸಂಸದರ ನಳಿನ್ ಕುಮಾರ್ ಕಟೀಲ್ ಪರವಾಗಿ ಮಾತನಾಡಿ ಭಾರೀ ಆಚ್ಚರಿ ಮೂಡಿಸಿದರು. ವೇದಿಕೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವ ಸಂಧರ್ಭದಲ್ಲಿ "ನನ್ನ ಮಿತ್ರ ಹಾಗೂ ಮಾಜಿ ಸಂಸದರದಂತಹ ನಳೀನ್ ಕುಮಾರ್ ಕಟೀಲ್ ಎಂದು ಹೇಳುತ್ತಾ ಮಾಜಿ ಎಂದು ಹೇಳಬಾರದು ರಾಜಕೀಯ ಎಂಬುದು ಅದೃಷ್ಟ ಹಾಗೂ ಪರಿಶ್ರಮದ ಆಟವಾಗಿದ್ದು ಇಲ್ಲಿ ಹಿರೋ ಇದ್ದವನು ಜಿರೋ ಆಗುತ್ತಾನೆ; ಜಿರೋ ಇದ್ದವನು ಹಿರೋ ಆಗುತ್ತಾನೆ ಅದ್ದರಿಂದ ಇಲ್ಲಿ ಎಲ್ಲಾವೂ ಕ್ಷಣಿಕ ಅದ್ದರಿಂದ ನಳೀನ್ ಕುಮಾರ್ ಕಟೀಲ್ ಅವರಿಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಅವಕಾಶಗಳು ರಾಜಕೀಯ ವಲಯದಲ್ಲಿ ಸಿಗಲಿ ಎಂದು ಆ ದೇವರಲ್ಲಿ ನಾವು ಕೂಡ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿ ಆಚ್ಚರಿ ಮೂಡಿಸಿದರು. ಶಿವಕುಮಾರ್ ಅವರ ಈ ಹೇಳಿಕೆ ಭಾರೀ ಆಚ್ಚರಿಗೆ ಕಾರಣವಾಯಿತು. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ; ಯಾರು ಮಿತ್ರರಲ್ಲ ಎಂಬುದು ಇವರುಗಳ ಮಾತಿನಿಂದ ಆರಿತುಕೊಳ್ಳಬಹುದು.

0 Comments