ತಮಿಳುನಾಡು: ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈ ಹಿಂದೆ ನಡೆದಿರುವ ಸಾವಿರಾರು ನಿದರ್ಶನಗಳು ನಮ್ಮ ಮುಂದಿವೆ. ಈ ಎಲ್ಲಾ ನಿದರ್ಶನಗಳಿಗೆ ಮತ್ತೊಂದು ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತಿದೆ. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಆರಳಿಸಿದ ಕೀರ್ತಿ ಯಡಿಯೂರಪ್ಪರಿಗೆ ಸಂದರೆ ತಮಿಳುನಾಡಿನಲ್ಲಿ ಕಮಲವನ್ನು ಆರಳಿಸುವ ಕೀರ್ತಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಸಲ್ಲುವುದು ಎಂಬ ಮಾತುಗಳು ಕೇಳಿ ಬರುವ ಹೊತ್ತಿನಲ್ಲಿಯೇ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಕ್ ನೀಡಲು ನಿರ್ಧಾರಿಸಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಹಲವಾರು ಭಾಗದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿ ಬಳಿಕ ಸೇವಾ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಬಳಿಕ ತಮ್ಮ ತವರು ರಾಜ್ಯಕ್ಕೆ ಹಿಂತಿರುಗಿ ಅಲ್ಲಿ ರಾಜಕೀಯ ಪಕ್ಷಕ್ಕೆ ಸೇರಿದರು. ಪ್ರಾದೇಶಿಕ ಪಕ್ಷ ಪ್ರಬಲವಾಗಿ ನೆಲೆಯೂರಿರುವ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಅಧಿಕಾರಕ್ಕೆ ತರುವುದು ಸುಲಭದ ಮಾತಲ್ಲ ಅದರು ಅಣ್ಣಾಮಲೈ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಅಲ್ಲಿ ಬಿಜೆಪಿಯನ್ನು ಭವಿಷ್ಯದಲ್ಲಿ ಅಧಿಕಾರಕ್ಕೆ ತರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂಬ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡರು. ಉನ್ನತ ಶಿಕ್ಷಣ ಹಾಗೂ ಅಪಾರ ಅನುಭವದ ನೆಲೆಗಟ್ಟಿನಲ್ಲಿ ಆರಂಭದಲ್ಲಿಯೇ ದೊಡ್ಡ ಮಟ್ಟದ ಜವಾಬ್ದಾರಿಗಳು ದೊರೆತವು ಹಾಗೂ ಜವಾಬ್ದಾರಿಗೆ ತಕ್ಕಂತೆ ಸಂಘಟನೆಯ ಕಾರ್ಯವನ್ನು ಮಾಡಿದರು. ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗದಿದ್ದರೂ ಶೇಕಡವಾರು ಮತಗಳಲ್ಲಿ ದೊಡ್ಡ ಮಟ್ಟದ ಗಳಿಕೆಯನ್ನು ಸಾಧಿಸಿದರು ಅದರೆ ಸದ್ಯ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ನಿರ್ಧಾರಿಸಲಾಗಿದ್ದು ಇದಕ್ಕೆ ರಾಜಕೀಯದ ನಾನಾ ಕಾರಣಗಳಿದ್ದು ಹಾಗೂ ಅಣ್ಣಾಮಲೈ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಬೇರೆ ಹುದ್ದೆಗಳನ್ನು ನೀಡಲು ನಿರ್ಧಾರಿಸಲಾಗಿದೆ ಎಂದು ತಿಳಿದು ಬರುತ್ತಿದೆ.

0 Comments