ನವದೆಹಲಿ: ಅಸಂಖ್ಯಾತ ಕಾರ್ಯಕರ್ತರನ್ನು ಒಳಗೊಂಡಿರುವ, ಸಂಕಷ್ಟದ ಸಂಧರ್ಭದಲ್ಲಿ ವೀರ ಸೇನಾನಿಗಳಂತೆ ಜೊತೆಯಾಗಿ ನಿಲ್ಲುವ ಆರ್.ಎಸ್.ಎಸ್ ಸಂಘಟನೆಯ ಕೇಂದ್ರ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಯುಗಾದಿಯ ದಿನವಾದ ಇಂದು ಭೇಟಿ ಕೊಡಲಿದ್ದಾರೆ. 'ಮಾಧವ' ಎಂಬ ಹೆಸರಿನಲ್ಲಿರುವ ನಿರ್ಮಾಣವಾಗಲಿರುವ ಕಣ್ಣಿನ ಅಸ್ಪತ್ರೆಯ ಶಂಕು ಸ್ಥಾಪನೆಯನ್ನು ನೆರವೆರಿಸಲು ಪ್ರಧಾನಿ ಮೋದಿ ನಾಗ್ಪುರಕ್ಕೆ ತೆರಳಲಿದ್ದಾರೆ. ಇದೇ ಸಂಧರ್ಭದಲ್ಲಿ ಸಂಘದ ಕೇಂದ್ರ ಕಚೇರಿಗೆ ಭೇಟಿ ಕೊಟ್ಟು ಮೋಹನ್ ಭಾಗವತ್ ಅವರ ಜೊತೆಗೆ ಒನ್ ಟು ಒನ್ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.
ಸಂಘಕ್ಕೆ ಇದು ಶತಮಾನೋತ್ಸವದ ಯುಗಾದಿ ಸಂಧರ್ಭವಾಗಿದ್ದು ಇದೇ ಸಂಧರ್ಭದಲ್ಲಿ ಮೋದಿಯವರ ಭೇಟಿ ಭಾರೀ ಮಹತ್ವ ಪಡೆದಿದೆ. ಪ್ರಧಾನಿಯಾಗುವ ಎರಡು ವರ್ಷಗಳ ಮೊದಲು ಗುಜಾರತ್ ಮುಖ್ಯಮಂತ್ರಿಯಾಗಿ ಭೇಟಿ ಕೊಟ್ಟಿದ್ದ ಮೋದಿ ಬಳಿಕ ಈ ಬಾರಿಯೇ ಸಂಘದ ಕಚೇರಿಗೆ ಭೇಟಿ ಕೊಡುತ್ತಿದ್ದಾರೆ. ಭಾರತದ ಮೊಟ್ಟ ಮೊದಲ ಪ್ರಧಾನಿಯೊಬ್ಬರು ಆರ್.ಎಸ್.ಎಸ್ ಕಚೇರಿಗೆ ಭೇಟಿ ಕೊಡುತ್ತಿರುವುದು ಎಂಬುದು ವಿಶೇಷ. ಇದೇ ಸಂಧರ್ಭದಲ್ಲಿ ಆರ್.ಎಸ್.ಎಸ್ ಸಂಸ್ಥಾಪಕರ ಸಮಾಧಿ ಸ್ಥಳಕ್ಕೆ ಭೇಟಿ ಕೊಡಲಿರುವ ಮೋದಿ ಅಲ್ಲಿಯೇ ಇರುವ ಆಂಬೇಡ್ಕರ್ ಅವರು ಬೌದ್ದ ಧರ್ಮವನ್ನು ಸ್ವೀಕರಿಸಿದ ಸ್ಥಳಕ್ಕೂ ಭೇಟಿ ಕೊಡಲಿದ್ದಾರೆ. ವರ್ಷದ ಮೊದಲ ದಿನ ಯುಗಾದಿಯಂದು ಮೋದಿ ಜೀ ಯವರ ಈ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

0 Comments