ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈವಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ವಿರುದ್ದ ಮುಜುಗರದ ಹೇಳಿಕೆಗಳನ್ನು ನೀಡುತ್ತಿದ್ದ ವಿಜಯಪುರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಬಿಜೆಪಿಯ ಕೇಂದ್ರಿಯ ಶಿಸ್ತು ಸಮಿತಿ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಎಲ್ಲಾ ಹುದ್ದೆಗಳಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದೆ.
ಶೋಕಾಸ್ ನೋಟಿಸ್ ಗೂ ಡೊಂಟ್ ಕೇರ್:
ಕೇಂದ್ರಿಯ ಶಿಸ್ತು ಸಮಿತಿ ವಿಜಯಪುರ ಶಾಸಕ ಯತ್ನಾಳ್ ಅವರಿಗೆ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತಾಗಿ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು ಮಾತ್ರವಲ್ಲದೆ ಪಕ್ಷದ ಅಂತರಿಕ ವಿಷಯಗಳನ್ನು ಬಹಿರಂಗವಾಗಿ ಹೇಳಿಕೆ ಕೊಡದಂತೆ ಸೂಚಿಸಲಾಗಿತ್ತು ಅದರೆ ಯತ್ನಾಳ್ ಮಾತ್ರ ಇನ್ನೂ ಮುಂದೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಶಿಸ್ತು ಸಮಿತಿಯ ಮುಂದೆ ಹೇಳಿ ಮತ್ತೇ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ದದ ಹೇಳಿಕೆಗಳನ್ನು ನೀಡಲು ಮತ್ತೇ ಆರಂಭಿಸಿದರು ಹಾಗೂ ವಿಜಯೇಂದ್ರ ವಿರೋಧಿಗಳನ್ನು ಒಟ್ಟುಗೂಡಿಸಿ ಸಭೆ ಸಮಾರಂಭಗಳನ್ನು ಮಾಡಲು ಆರಂಭಿಸಿದರು ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ತೆಗೆದುಕೊಂಡ ಕೇಂದ್ರಿಯ ಶಿಸ್ತು ಸಮಿತಿ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದರು.
೨೦೦೬ರಲ್ಲೂ ಉಚ್ಚಾಟನೆಗೊಂಡಿದ್ದ ಯತ್ನಾಳ್:
ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಂಧರ್ಭದಲ್ಲಿಯೂ ಇದೇ ಯತ್ನಾಳ್ ಅವರು ಪಕ್ಷದ ವಿರುದ್ದ ಹೇಳಿಕೆಗಳನ್ನು ನೀಡಿ ಹೈಕಮಾಂಡ್ ಕೋಪಕ್ಕೆ ಗುರಿಯಾಗಿದ್ದರು ಈ ವೇಳೆಯಲ್ಲೂ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆ ಬಳಿಕ ಯಡಿಯೂರಪ್ಪನವರು ಮತ್ತೇ ಅಧ್ಯಕ್ಷರಾದ ಸಂಧರ್ಭದಲ್ಲಿ ಪಕ್ಷದ ಒಳಗೆ ಕರೆತಂದರು.
ರೆಬೆಲ್ಸ್ ಗಳಿಗೆ ಕಠಿಣ ಸಂದೇಶ:
ಯತ್ನಾಳ್ ಅವರನ್ನು ದೀಢಿರ್ ಉಚ್ಚಾಟನೆ ಗೊಳಿಸುವ ಮೂಲಕ ರೆಬೆಲ್ಸ್ ಗಳಿಗೆ ಕಠಿಣ ಸಂದೇಶವನ್ನು ಕೇಂದ್ರಿಯ ಶಿಸ್ತು ಸಮಿತಿ ನೀಡಿದೆ. ಈ ಹಿಂದೆ ಹಲವಾರು ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ಪಕ್ಷದ ಅನುಮತಿಯ ಹೊರತಾಗಿಯೂ ಬಹಿರಂಗ ಸಭೆಗಳನ್ನು ನಡೆಸುತ್ತಿದ್ದರು ಅದರೆ ಸದ್ಯ ಅದರ ಪ್ರಮುಖ ನಾಯಕನನ್ನೆ ಪಕ್ಷದಿಂದ ಹೊರಗಡೆ ಇಡುವ ಮೂಲಕ ಇತರರಿಗೆ ಕಠಿಣ ಸಂದೇಶವನ್ನು ಪರೋಕ್ಷವಾಗಿ ರವಾನಿಸಲಾಗಿದೆ.

0 Comments