ನವದೆಹಲಿ: ರಾಜಕೀಯ ಎಂಬುದು ನಿಂತ ನೀರಲ್ಲ ಯಾವ ಸಂಧರ್ಭದಲ್ಲಿ ಯಾವ ನಾಯಕ ಏನು ಮಾಡುತ್ತಾನೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಬೆಳಿಗ್ಗೆ ಒಂದು ಪಕ್ಷದಲ್ಲಿ ಗುರುತಿಸಿಕೊಂಡತ ಮಧ್ಯಾಹ್ನ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡ ಆನೇಕ ಪ್ರಸಂಗಗಳು ನಮ್ಮ ಕಣ್ಣ ಮುಂದಿದೆ. ಅದೇ ರೀತಿ ಕರ್ನಾಟಕ ರಾಜಕೀಯದಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು ಎಂದರೆ ತಪ್ಪಾಗಲಾರದು.
ಬಹುಮತಕ್ಕಿಂತಲೂ ಅಧಿಕ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ನೆಮ್ಮದಿಯಾಗಿ ಆಡಳಿತವನ್ನು ನಡೆಸಲು ಬಿಡುವಂತಹ ಲಕ್ಷಣಗಳು ಕಾಣುತ್ತಿಲ್ಲ. ಮುಖ್ಯಮಂತ್ರಿ ಪದವಿಗಾಗಿ ಅಂತರಿಕವಾಗಿ ನಡೆದಿರುವ ಪವರ್ ಶೇರಿಂಗ್ ತಂತ್ರದ ಅಸಲಿ ಆಟಗಳು ಈಗ ಆರಂಭವಾಗುತ್ತಿದೆ. ಈ ನಡುವೆ ಸಚಿವರೊಬ್ಬರ ವಿರುದ್ದ ಹನಿಟ್ರ್ಯಾಪ್ ನಡೆಸಲು ಯೋಜಿಸಿರುವ ಪ್ಲಾನ್ ಬಗ್ಗೆ ಭಾರೀ ಚರ್ಚೆಗಳಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನ ಹೈಕಮಾಂಡ್ ಮಟ್ಟಕ್ಕೆ ವಿಷಯಗಳು ತಲುಪಿದ್ದು ಬೇರೆಯಾದ್ದೇ ಹಾದಿ ಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಈೆ ಎಲ್ಲಾದರ ಮಧ್ಯೆ ದೆಹಲಿಯಲ್ಲಿ ಕರ್ನಾಟಕದ ಸಚಿವರು ಹಾಗೂ ಪ್ರಭಾವಿ ನಾಯಕರಾಗಿರುವ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಅವರು ಎನ್.ಡಿ.ಎ ನೇತೃತ್ವದ ಸರ್ಕಾರದಲ್ಲಿ ಉಕ್ಕು ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಎಚ್.ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿರುವುದು ಭಾರೀ ಚರ್ಚೆಗೆ ಗ್ರಸವಾಗಿದೆ. ಡಿನ್ನರ್ ನೆಪದಲ್ಲಿ ಭೇಟಿಯಾಗಿರುವ ಈ ಇಬ್ಬರು ನಾಯಕರ ನಡೆ ಭಾರೀ ಕುತೂಹಲ ಮೂಡಿಸಿದೆ. ಇದೇ ಸಂಧರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರನ್ನು ಕೂಡ ಸತೀಶ್ ಭೇಟಿಯಾಗಿದ್ದು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಡಿ.ಕೆ ಶಿವಕುಮಾರ್ ಅವರಿಂದ ಸದಾ ದೂರವಿರುವ ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿಯರನ್ನು ಭೇಟಿಯಾಗಿ ರಾಜಕೀಯ ಚದುರಂಗದ ಆಟವನ್ನು ಆಡಲು ಸಿದ್ದತೆ ನಡೆಸಿದ್ದಾರೆಯೇ ಎಂಬ ಬಗ್ಗೆ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರಲು ಆರಂಭಿಸಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

0 Comments