ಪುಣ್ಯಕ್ಷೇತ್ರ 'ಧರ್ಮಸ್ಥಳ'ದ ಜೊತೆ ನಾವಿದ್ದೇವೆ.! ಮಾರ್ಚ್ 27 ಗುರುವಾರದಂದು ಬೃಹತ್ ಸಮಾವೇಶ

12 ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಾಳ ನಿವಾಸಿ ಸೌಜನ್ಯ ಎಂಬ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿ ಮರುದಿನ ಭೀಕರವಾಗಿ ದೈಹಿಕ ದೌರ್ಜನ್ಯಕ್ಕೊಳಗಾಗಿ ಕೊ'ಲೆಯಾದ ಸ್ಥಿತಿಯಲ್ಲಿ ಪತ್ತೆಯಾಗುತ್ತಾಳೆ. ಈ ಘಟನೆ ಧರ್ಮಸ್ಥಳದ ಆ ಪರಿಸರದಲ್ಲಿ ಭಾರೀ ಚರ್ಚೆಗೆ ಒಳಗಾಗುತ್ತದೆ. ಆ ಬಳಿಕ ನಡೆದ ಘಟನೆಗಳು ನಿಮಗೆಲ್ಲ ತಿಳಿದೆ ಇದೆ. ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬ ವರ್ಗದವರ ಮೇಲಿನ ಆರೋಪ ಹಾಗೂ ಇನ್ನಿತರ ಎಲ್ಲಾ ಘಟನಾವಳಿಗಳ ನಡುವೆ ಹಿಂದೂಗಳ ಪುಣ್ಯಕ್ಷೇತ್ರಗಳಿಗೆ ಅಪಮಾನ ಮಾಡಲಾಗುತ್ತಿದೆ ಎಂಬ ಕೂಗು ಕೇಳಿ ಬರಲು ಆರಂಭವಾಯಿತು.

ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬ ವರ್ಗದವರ ಯಾವುದೇ ಕೈವಾಡವಿಲ್ಲ ಬದಲಾಗಿ ಕೆಲವರು ಈ ಬಗ್ಗೆ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಧರ್ಮಸ್ಥಳ ಭಕ್ತ ವೃಂದ ಹೇಳುತ್ತಿದೆ. ಈ ನಡುವೆ ಧರ್ಮಸ್ಥಳ ರಕ್ಷಣಾ ವೇದಿಯಿಕೆಯಿಂದ ಧರ್ಮಸ್ಥಳದಲ್ಲಿ ಮಾರ್ಚ್ ೨೭ ರಂದು ಬೃಹತ್ ಸಮಾವೇಶ ನಡೆಯಲಿದೆ ಎಂದು ಧರ್ಮಸ್ಥಳದ ರಕ್ಷಣಾ ವೇದಿಕೆಯ ಪ್ರಮುಖರು ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಮಾರ್ಚ್ 27 ಗುರುವಾರ 9 ಗಂಟೆಗೆ ಆರಂಭ:

ಧರ್ಮಸ್ಥಳ ಹಿತರಕ್ಷಣಾ ವೇದಿಕೆ ವತಿಯಿಂದ ನಡೆಯುವ ಈ ಬೃಹತ ಸಮಾವೇಶ ಮಾರ್ಚ್ 27 ಗುರುವಾರದಂದು ಬೆಳಿಗ್ಗೆ 9 ಗಂಟೆಗೆ ಅಣ್ಣಪ್ಪ ಬೆಟ್ಟದಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಪಾದನಡಿಗೆಯಲ್ಲಿ ಬಂದು ಪ್ರಕೃತಿ ಚಿಕಿತ್ಸಾಲಯದ ಬಳಿ ಇರುವ ಮೈದಾನದಲ್ಲಿ ಎಲ್ಲಾರೂ ಒಟ್ಟುಗೂಡಿ ಸಮಾವೇಶ ನಡೆಯಲಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯುವ ಈ ಸಮಾವೇಶ ಕಾರ್ಯಕ್ರಮ ಸುಮಾರು ೧೧.೩೦  ತನಕ ನಡೆಯಲಿದೆ ಎಂದು ತಿಳಿಸಿದ್ದಾರೆ. ಧರ್ಮಸ್ಥಳದ ಗ್ರಾಮಸ್ಥರು, ಭಕ್ತರು ಅಥವಾ ಹೊರಗಿನ ಯಾರು ಕೂಡ ಈ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಧರ್ಮಸ್ಥಳದ ವಿರುದ್ದ ಯಾವ ರೀತಿಯ ಸಂಚನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಎಳೆ ಎಳೆಯಾಗಿ ಸ್ಪೋ'ಟಕ ಮಾಹಿತಿಗಳನ್ನು ಬಿಚ್ಚಿಡಲಾಗುವುದು ಎಂದು ತಿಳಿಸಿದ್ದಾರೆ. ಈ ಸಮಾವೇಶಕ್ಕೆ ಎಲ್ಲಾರ ಸಹಕಾರ ಅತ್ಯಗತ್ಯ ಎಂದು ಕೇಳಿಕೊಂಡಿದ್ದಾರೆ.


Post a Comment

0 Comments