ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ಕಾರ್ಯಕ್ರಮದಲ್ಲಿ ದೈವಕ್ಕೆ ಅವಮಾನ.! ಇದೇನಾ ನಮ್ಮ ಸಂಸ್ಕೃತಿ ಎಂದು ಭಾರೀ ಆಕ್ರೋಶ.?

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಕಾಲೇಜು ಒಂದರ ಕಾರ್ಯಕ್ರಮದಲ್ಲಿ ದೈವಕ್ಕೆ ಅಪಮಾನ ಮಾಡಿದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ತುಳುನಾಡಿನ ಆಚರಣೆಗಳನ್ನು ಭಕ್ತಿಯಿಂದ ಪಾಲಿಸಬೇಕಿದ್ದ ನಮ್ಮ ನೆಲದಲ್ಲೇ ಈ ರೀತಿಯ ಅವಮಾನ ಎಷ್ಟರ ಮಟ್ಟಿಗೆ ಸರಿ ಎಂಬ ಆಕ್ರೋಶದ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ.

ಪುತ್ತೂರು ತಾಲೂಕಿನ ನೆಹರು ನಗರದ ಪ್ರದೇಶದಲ್ಲಿರುವ ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದ ಕಾರ್ಯಕ್ರಮ ಪ್ರತಿ ವರ್ಷ ಭಾರೀ ವಿಜೃಂಭನೆಯಲ್ಲಿ ಜರಗುತ್ತದೆ ಅದೇ ರೀತಿ ಈ ವರ್ಷವೂ ಭಾರೀ ಸಂಭ್ರಮ ಹಾಗೂ ಸಡಗರದಿಂದ ಜರುಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದ್ದು ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ತುಳುನಾಡಿನ ದೈವದ ವೇಷ ಧರಿಸಿ ನೃತ್ಯ ಮಾಡಿದ್ದು ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಕರಾವಳಿ ಭಾಗದ ಪ್ರಮುಖ ಹಿಂದೂ ನಾಯಕರೊಬ್ಬರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆಯಲ್ಲಿಯೇ ಈ ರೀತಿಯ ಅಪಮಾನ ಎಷ್ಠು ಸರಿ ಎಂಬುದರ ಪ್ರಶ್ನೆಗಳು ಕೇಳಿಬರುತ್ತಿದೆ. ಮುಸ್ಲಿಂ ಅಥವಾ ಕ್ರೈಸ್ತ ಧರ್ಮದ ಒಡೆತನವಿರುವ ಸಂಸ್ಥೆಗಳಲ್ಲಿ ಈ ರೀತಿಯ ಘಟನೆ ನಡೆದಿದ್ದಾರೆ ಬೇರೆಯದ್ದೇ ರೀತಿಯ ಹೋರಾಟಗಳು ನಡೆಯುತಿತ್ತು ಎಂಬ ಮಾತುಗಳು ಶೋಷಿಯಾಲ್ ಮೀಡಿಯಾ ಕಮೆಂಟ್ ಗಳಲ್ಲಿ ಕಾಣಸಿಗುತ್ತಿದೆ.

'ಕಾಂತಾರ' ಚಲನಚಿತ್ರ ಬಿಡುಗಡೆಯಾದ ಬಳಿಕ ತುಳುನಾಡಿನ ದೈವಗಳಿಗೆ ಬೇರೆ ಬೇರೆ ಭಾಗಗಳಲ್ಲಿ ಅವಮಾನಗಳಾಗುತ್ತಿರುವ ಬಗೆಗೆ ಸುದ್ದಿಯಾಗುತಿತ್ತು ಇದಕ್ಕೆ ದೊಡ್ಡ ಮಟ್ಟದ ಆಕ್ರೋಶಗಳು ಹೆಚ್ಚಾಗುತಿತ್ತು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿಯ ಚಲನಚಿತ್ರ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮಗಳನ್ನು ಬಹಿಸ್ಕರಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು ಅದರೆ ಸದ್ಯ ತುಳುನಾಡಿನ ಕಾರಣಿಕ ದೈವಗಳಿಗೆ ನಮ್ಮ ನಾಡಿನಲ್ಲಿಯೇ ಈ ರೀತಿಯ ಅವಮಾನಗಳಾದರೆ ನಮ್ಮ ಸಂಸ್ಕೃತಿಯನ್ನು ಕಾಪಾಡುವವರು ಯಾರು ಎಂಬ ಪ್ರಶ್ನೆಗಳು ಮೂಡತ್ತಿವೆ.

ತುಳುನಾಡಿನ ದೈವಗಳು ಯಾವುದೋ ಸಭೆ ಸಮಾರಂಭಗಳ ವೇದಿಕೆಯಲ್ಲಿ ಪ್ರದರ್ಶನಕ್ಕಿಡುವ ವಸ್ತುವಲ್ಲ ಬದಲಾಗಿ ಅವುಗಳು ಇಲ್ಲಿನ ಜನರ ನಂಬಿಕೆ, ದೇವರಿಗಿಂತ ದೈವ ಮೊದಲು ಎಂದು ನಂಬುವ ಜನ ತುಳುವರು ಆ ಕಾರಣದಿಂದ ತಾಂತ್ರಿಕ ಯುಗದ ಕಾರಣ ನೀಡಿ ನಮ್ಮ ದೈವಗಳ ಪಾವಿತ್ರ್ಯತೆಯನ್ನು ನಾಶ ಮಾಡುವ ಪ್ರಯತ್ನವನ್ನು ನಾವುಗಳೇ ಮಾಡಬಾರದು. ತಪ್ಪು ಯಾರು ಮಾಡಿದರೂ ತಪ್ಪೇ ಅದ್ದರಿಂದ ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದು ಉತ್ತಮ.


Post a Comment

0 Comments