ಕ್ರಿಕೆಟ್: T20 ಕ್ರಿಕೆಟ್ ಪಂದ್ಯಗಳ ಹಬ್ಬ ಎಂದು ಕರೆಸಿಕೊಳ್ಳುವ ದೇಸಿ ಟೂರ್ನಿ ಐಪಿಎಲ್ ಪಂದ್ಯಗಳು ಈಗಾಗಲೇ ಭರ್ಜರಿಯಾಗಿ ಆರಂಭಗೊಂಡಿದೆ. ಈಗಾಗಲೇ ೩ ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಇಂದು ನಾಲ್ಕನೇ ಪಂದ್ಯ Dr. Y.S. Rajasekhara Reddy ACA-VDCA Cricket Stadium, Visakhapatnam ನಲ್ಲಿ ನಡೆಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿ:
ಐಪಿಎಲ್ ನ ೪ನೇ ಪಂದ್ಯದಲ್ಲಿ DC ಹಾಗೂ LSG ತಂಡಗಳು ವಿಶಾಖಪಟ್ನಂ ನಲ್ಲಿ ಮುಖಾಮುಖಿಯಾಗಲಿದೆ. ಎರಡೂ ತಂಡಗಳಿಗೂ ಹೊಸ ನಾಯಕರುಗಳಿಗೆ ಮಣೆ ಹಾಕಲಾಗಿದೆ. ಡೆಲ್ಲಿ ತಂಡವನ್ನು ಭಾರತದ ಖ್ಯಾತ ಅಲ್ ರೌಂಡರ್ ಅಕ್ಷರ್ ಪಟೇಲ್ ಮುನ್ನಡೆಸಿದರೆ, ಲಕ್ನೋ ತಂಡವನ್ನು ರಿಷಬ್ ಪಂತ್ ಮುನ್ನಡೆಸಲಿದ್ದಾರೆ. ಒಟ್ಟಾರೆಯಾಗಿ ಐಪಿಎಲ್ ನ ಸೋಮವಾರದ ೪ನೇ ಪಂದ್ಯ ಭಾರೀ ರೋಚಕತೆಯಿಂದ ಕೂಡಿರಲಿದೆ.
ಡೆಲ್ಲಿ ತಂಡದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್:
ಮಾಲೀಕರ ಹಾಗೂ ನಾಯಕನ ನಡುವೆ ನಡೆದ ಹಲವು ಗೊಂದಲಗಳ ಬಳಿಕ ತಂಡವನ್ನು ತೊರೆದಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಈ ಬಾರಿ ಡೆಲ್ಲಿ ತಂಡದಲ್ಲಿ ಆಟವಾಡಲಿದ್ದಾರೆ. ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸುವ ಇವರು ಕಳೆದ ಚಾಂಪಿಯನ್ಸ್ ಟ್ರೋಪಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.
0 Comments