ಪ್ರತಿಯೊಬ್ಬ ಹಿಂದೂವಿನ ಮನೆ ಮನದಲ್ಲಿ ಮೊಳಗಲಿ ಶಂಖನಾದ; 'ಶಂಖ'ದ ಹಿನ್ನೆಲೆ, ಮಹತ್ವ, ಹಾಗೂ ಪ್ರಯೋಜನದ ಒಂದು ಇಣುಕು ನೋಟ

"ಪ್ರತಿನಿತ್ಯ 2 ಬಾರಿ ಅಂದರೆ ಸೂರ್ಯೋದಯ, ಸೂರ್ಯಾಸ್ತದ ಸಮಯದಲ್ಲಿ ಪ್ರತಿ ಸನಾತನಿ ಹಿಂದೂಗಳ ಮನೆಯಲ್ಲಿ ಏಕಕಾಲದಲ್ಲಿ 'ಶಂಕ'ನಾದವನ್ನು ತಪ್ಪದೇ ಮೊಳಗಿಸಿ('ಶಂಕ'ವನ್ನು ಊದಿ)."

ಭರತ ಖಂಡದ ಹಿಂದೂ ಸಹೃದಯಿಗಳ ಸಂಪ್ರದಾಯ ಹಾಗೂ ಆಚರಣೆ ವಿಶ್ವದಲ್ಲಿರುವ ಇತರ ಧರ್ಮಗಳಿಗೆ ಹೋಲಿಸಿದರೆ ಅತ್ಯಂತ ಭಿನ್ನ ಹಾಗೂ ವಿಶೇಷ. ಭಾರತೀಯರು ಎಲ್ಲಾದರಲ್ಲಿಯೂ ದೇವರನ್ನು ಕಾಣುವ ಮನಸ್ಸುಲ್ಲವರು ಭೂಮಿಯ ಮೇಲಿರುವ ಪ್ರತಿಯೊಂದು ಕಣವೂ ಪರಮಾತ್ಮನ ಸೃಷ್ಟಿ ಆತನ ಅಪ್ಪಣೆ ಇಲ್ಲದೆ ಒಂದು ಸಣ್ಣ ಹುಲ್ಲು ಕಡ್ಡಿಯು ಅಲುಗಾಡದು ಎಂದು ಬಲವಾಗಿ ನಂಬುವ ವಿಶಿಷ್ಠ ಗುಣವುಳ್ಳ ಜನರು. ವಿಶ್ವದ ಆನೇಕ ರಾಷ್ಟ್ರಗಳು ತಮ್ಮದು ಕ್ರಿಶ್ಚಿಯನ್ ರಾಷ್ಟ್ರ, ತಮ್ಮದು ಮುಸ್ಲಿಂ ರಾಷ್ಟ್ರ ಎಂದು ಘೋಷಿಸಿಕೊಂಡರೂ ಭಾರತ ಮಾತ್ರ ಸರ್ವ ಧರ್ಮಗಳನ್ನು ಸಮಾನವಾಗಿ ಕಾಣುವ 'ಜಾತ್ಯತೀತ' ರಾಷ್ಟ್ರ ಎಂದು ಹೆಮ್ಮೆಯಿಂದ ತಲೆಯೆತ್ತಿ ಹೇಳುತ್ತದೆ.

ಭಾರತ ಒಂದು 'ಜಾತ್ಯತೀತ' ರಾಷ್ಟ್ರವಾದರೂ ಇಲ್ಲಿನ ಬಹುಸಂಖ್ಯಾತ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲಿ ಇಂದು ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳ ಪೂರ್ವಪರ ಮಾಹಿತಿಗಳು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಧರ್ಮಗಂಥಗಳಲ್ಲಿ ದಾಖಲಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಮದ್ದು ಎಂದು ಕರೆಸಿಕೊಳ್ಳುವ 'ಯೋಗ'ದ ಮೂಲ ನಮ್ಮ ಭಾರತ. 'ಯೋಗ'ದ ಮೂಲ ಸೂತ್ರವನ್ನು "ಪತಂಜಲಿ ಮುನಿ"ಗಳು ಸಾಮಾನ್ಯ ಯುಗ(CE) ೨ ರಲ್ಲಿ ತಿಳಿಸಿಕೊಟ್ಟಿದ್ದರು. ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ಪರಿಚಯಿಸಿದ್ದನ್ನು ಇಂದು ವಿಶ್ವ ಆಳವಡಿಸಿಕೊಳ್ಳುತ್ತಿದೆ ಹಾಗಾದರೆ ಈಗ ಹೇಳಿ ಭಾರತದ ಶಕ್ತಿ ಎಂತಹದ್ದು.? ಈ ಕಾರಣಕ್ಕೆ ಭಾರತ 'ವಿಶ್ವಕ್ಕೆ ಗುರು' ಎಂದು ಕರೆಸಿಕೊಳ್ಳುವುದು. ಇಂತಹ ಆನೇಕ ವಿಶಿಷ್ಟ ವಿಷಯಗಳನ್ನು ವಿಶ್ವಕ್ಕೆ ತಿಳಿಸಿಕೊಟ್ಟ ಹೆಮ್ಮೆ ಭಾರತದ್ದು. 

ಭಾರತದ ಸಂಪ್ರದಾಯ ಹಾಗೂ ಆಚರಣೆಗಳಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುವ 'ಶಂಖ'ದ ಹಿನ್ನೆಲೆ, ಮಹತ್ವ ಹಾಗೂ ಪ್ರಯೋಜನದ ಬಗ್ಗೆ ಒಮ್ಮೆ ತಿಳಿದುಕೊಳ್ಳೋಣ. ಶಂಖವನ್ನು ‘ಬ್ರಹ್ಮಾಂಡ ಗರ್ಭಾಶಯ’ (cosmic womb) ಎನ್ನಲಾಗಿದೆ. ಶಂಖವನ್ನೂದಿದಾಗ ಹೊರಬರುವ ಶಬ್ದವೇ ಪ್ರಣವನಾದ (ಓಂ) ಆಗಿದ್ದು ಈ ಜಗತ್ತಿನ ಸಕಲ ಚರಾಚರವೆಲ್ಲದಕ್ಕೂ ಮೂಲ ಅದೇ ಎಂಬ ಪ್ರತಿಪಾದನೆಯಿದೆ. ಪುರಾಣಗಳಲ್ಲಿ ಭಗವಾನ್ ವಿಷ್ಣು ಹಾಗೂ ಮಹಾಶಿವ ಶಂಕಚಕ್ರಗಳನ್ನು ಧರಿಸುತ್ತಾರೆ. ದ್ವಾಪರಯುಗದಲ್ಲಿ ಬರುವ ಶ್ರೀ ಕೃಷ್ಣನು ಮಹಾಭಾರತ ಯುದ್ದದ ಸಂಧರ್ಭದಲ್ಲಿ 'ಪಾಂಚಜನ್ಯ' ಎಂಬ ಶಂಕವನ್ನು ಊದುವ ಮೂಲಕ ಯುದ್ದವನ್ನು ಆರಂಭಿಸುತ್ತಾನೆ ಎಂಬ ಉಲ್ಲೇಖವಿದೆ ಅದ್ದರಿಂದ ಪುರಾಣಗಳ ಕಾಲದಿಂದದಲೂ ಶಂಖ ಹಾಗೂ ಶಂಖನಾದಕ್ಕಿರುವ ಮಹತ್ವವನ್ನು ತಿಳಿಸುತ್ತದೆ.

'ಶಂಖ'ನಾದದಿಂದ ನಕಾರತ್ಮಕ ಶಕ್ತಿಗಳು ದೂರು:

ಪೂಜೆ, ಯಾಗ-ಯಾಜ್ಞದಿಗಳ ಸಂಧರ್ಭಗಳಲ್ಲಿ ಶಂಕನಾದ ಮೊಳಗಿಸುವುದು ಸಾಮಾನ್ಯವಾಗಿರುತ್ತದೆ. 'ಶಂಕ'ನಾದವನ್ನು ಮೊಳಗಿಸಿದಾಗ ನಕಾರತ್ಮಕ ಶಕ್ತಿಗಳು ದೂರವಾಗಿ ಸಕಾರತ್ಮಕ ಶಕ್ತಿಗಳು ಸರ್ವ ವ್ಯಾಪಿಯಾಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಅದ್ದರಿಂದ ದೇವಸ್ಥಾನಗಳಲ್ಲಿ ಹೆಚ್ಚಾಗಿ ಶಂಕ, ಜಾಗಟೆ ಹಾಗೂ ಘಂಟೆಗಳ ನಾದವನ್ನು ಜೋರಾಗಿ ಮೊಳಗಿಸಲಾಗುತ್ತದೆ.

ಪ್ರತಿನಿತ್ಯ ಎರಡು ಬಾರಿ ಪ್ರತಿಯೊಬ್ಬ ಸನಾತನಿಗಳ ಮನೆಯಲ್ಲಿ ಮೊಳಗಳಿ 'ಶಂಕ'ನಾದ:

ಸನಾತನ ಹಿಂದೂ ಧರ್ಮದ ಶಕ್ತಿ ಏನೆಂಬುದನ್ನು ತಿಳಿಯಬೇಕಾದರೆ ನಮ್ಮಲ್ಲಿರುವ ಶ್ರದ್ದೆ ಹೆಚ್ಚಬೇಕು. ನಮ್ಮ ಧರ್ಮದ ಆಚಾರ ಪದ್ದತಿಗಳನ್ನು ಪ್ರತಿಯೊಬ್ಬರು ಶ್ರದ್ದೆಯಿಂದ ಆಳವಡಿಸಿಕೊಳ್ಳಬೇಕು. ನಾನೋರ್ವ ಹಿಂದೂ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಬದಲಾಗಿ ಒಬ್ಬ ಹಿಂದೂ ತನ್ನ ಧಾರ್ಮಿಕ ಆಚರಣೆಯ ಶ್ರದ್ದೆಯನ್ನು ಪಾಲಿಸಬೇಕು ಆ ಕಾರಣದಿಂದಾಗಿ ಪ್ರತಿಯೊಬ್ಬ ಸನಾತನ ಹಿಂದೂಗಳ ಮನೆಯಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಏಕಕಾಲದಲ್ಲಿ 'ಶಂಕ'ನಾದವನ್ನು ಮೊಳಗಿಸುವುದನ್ನು ಆರಂಭಿಸಿ. ಈ ಶ್ರದ್ದೆಯನ್ನು ಒಬ್ಬ ಹಿಂದೂ ಆರಂಭಿಸಿದರೆ ನಾಳೆ ಇಡೀ ಹಿಂದೂ ಸಮಾಜ ಈ ಕಾರ್ಯವನ್ನು ಬೆಂಬಲಿಸುತ್ತದೆ. ಈ ರೀತಿಯ ಶ್ರದ್ದೆಯನ್ನು ರೂಢಿಸಿಕೊಂಡರೆ ನಕಾರತ್ಮಕ ಶಕ್ತಿಗಳು ದೂರವಾಗುವುದರ ಜೊತೆಗೆ ನಮ್ಮ ಸನಾತನ ಹಿಂದೂ ಆರಾಧನ ಪದ್ದತಿಯ ಶಕ್ತಿ ಏನೆಂಬುದು ಇತರರಿಗೂ ತಿಳಿಯಲಿ.

'ಶಂಖ'ದಿಂದ ಬರುವ ತೀರ್ಥ ಏಕೆ ಶ್ರೇಷ್ಠ:

'ಶಂಖ'ದ ಮೂಲಕ ದೇವರಿಗೆ ನೀರನ್ನು ಸುರಿದು ಆಭಿಷೇಕ ಮಾಡುವುದನ್ನು ನೀವೂ ಗಮನಿಸಿರಬಹುದು. ಶಂಖದ ಮೂಲಕ ಸುರಿದ ನೀರು ಅತ್ಯಂತ ಶುಭ ಸಂಕೇತ ಎಂಬ ನಂಬಿಕೆ ನಮ್ಮ ಹಿರಿಯರದ್ದು. ಮಾತ್ರವಲ್ಲದೆ ಶಂಖವೂ ದೇವಿ ಲಕ್ಷ್ಮೀಯ ಸ್ವರೂಪ ಎಂದು ಉಲ್ಲೇಖವಿದೆ ಅದ್ದರಿಂದ 'ಶಂಖ'ದ ಮೂಲಕ ಬರುವ ತೀರ್ಥ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

'ಶಂಖ' ಊದುವುದರಿಂದಾಗುವ ಆರೋಗ್ಯಕರ ಪ್ರಯೋಜನಗಳು:

'ಶಂಖ' ಊದುವುದರಿಂದ ಹಲವಾರು ರೀತಿಯಲ್ಲಿ ಆರೋಗ್ಯಕ್ಕೂ ಪ್ರಯೋಜನಗಳಿವೆ. ದಿನನಿತ್ಯ ಶಂಖವನ್ನು ಊದುವುದರಿಂದ ಉಸಿರಾಟ ತೊಂದರೆಗಳು ದೂರವಾಗುತ್ತದೆ. 'ಶಂಖ'ವೂ ಸುಣ್ಣದ ವಸ್ತುವಿನಿಂದ ಮಾಡಲ್ಪಟ್ಟಿರುವುದರಿಂದ ಅದರಲ್ಲಿರುವ ಕ್ಯಾಲ್ಸಿಯಂ ಅಂಶಗಳು ಮಾನವನ ದೇಹದ ಮೂಳೆಗಳ ಸದೃಢತೆಗೆ ಸಹಕಾರಿಯಾಗುತ್ತದೆ. ವಾತ-ಪಿತ್ತದಂತಹ ಸಮಸ್ಯೆಗಳು ದೂರವಾಗುತ್ತದೆ.

ಪ್ರತಿದಿನವೂ ಮನೆ-ಮನಗಳಲ್ಲಿ ಮೊಳಗಲಿ ಶಂಖನಾದ:

'ಶಂಖ'ವನ್ನು ಕೇವಲ ಬ್ರಾಹ್ಮರು ಮಾತ್ರ ಬಳಸಬಹುದು ಎಂಬ ಕೆಲವು ತಪ್ಪು ಕಲ್ಪನೆಗಳಿವೆ. ಇದು ಸತ್ಯಕ್ಕೆ ದೂರವಾದದ್ದು, 'ಶಂಖ' ನಾದವನ್ನು ಮುಂಜಾನೆಯ ಹಾಗೂ ಸಂಜೆಯ ಪೂಜೆಯ ಸಂಧರ್ಭದಲ್ಲಿ ಮೊಳಗಿಸಬಹುದು. ವಿಶೇಷ ಸಂಧರ್ಭಗಳಾದ ಶ್ರೀ ರಾಮನವಮಿ, ವಿಜಯದಶಮಿ, ಗುರು ಪೌರ್ಣಮಿಯಂತಹ ವಿಶೇಷ ಸಂಧರ್ಭಗಳಲ್ಲಿಯೂ 'ಶಂಕ'ನಾದವನ್ನು ಮೊಳಗಿಸಬಹುದು. ನಮ್ಮೊಳಗಿನ ಹಾಗೂ ನಮ್ಮ ಸುತ್ತಮುತ್ತಲಿನ ನಕಾರತ್ಮಕ ಶಕ್ತಿಗಳನ್ನು ದೂರಗೊಳಿಸಲು 'ಶಂಕ' ನಾದ ಪ್ರಯೋಜನಕಾರಿ. ದಕ್ಷಿಣಾಭಿಮುಖವಾಗಿರುವ ಹಾಗೂ ಬಿಳಿ ಬಣ್ಣದ 'ಶಂಕ' ಶ್ರೇಷ್ಠ ಎಂಬ ನಂಬಿಕೆಯೂ ಇದೆ. ಸನಾತನ ಹಿಂದೂ ಧರ್ಮದ ಆಸ್ಮಿತೆಯಲ್ಲಿ ಶಂಕವು ಒಂದು ಆ ಕಾರಣದಿಂದಾಗಿ ಹಿಂದೂಗಳದ ಪ್ರತಿಯೊಬ್ಬರು 'ಶಂಕ'ನಾದವನ್ನು ಮೊಳಗಿಸುವುದು ಉತ್ತಮ ಇದರಿಂದ ನಮ್ಮ ಆಚರಣೆಯ ಜೊತೆಗೆ ಧರ್ಮದ ಪಾಲನೆಯಾಗುತ್ತದೆ.

Post a Comment

0 Comments