ಮಾಜಿ ಕೇಂದ್ರ ಸಚಿವ, ವಿಜಯಪುರದ ಹಾಲಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿದ ಬಳಿಕ ಪಕ್ಷದಲ್ಲಿ ದೊಡ್ಡ ಮಟ್ಟದ ಸಂಚಲನ ಉಂಟಾಗಿದೆ. ಸಾಲು ಸಾಲು ನೋಟಿಸ್ ಗಳ ಬಳಿಕವೂ ತಮ್ಮ ಹಳೆ ಚಾಲೆಯನ್ನು ಮುಂದುವರಿಸಿದ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸುವ ನಿರ್ಧಾರವನ್ನು ಅನಿವಾರ್ಯವಾಗಿ ಕೈಗೊಳ್ಳಲಾಯಿತು. ಸದ್ಯ ಯತ್ನಾಳ್ ಉಚ್ಚಾಟನೆಯ ಬಳಿಕ ರೆಬೆಲ್ಸ್ ಗಳಿಗೆ ದಾರಿ ಕಾಣದಂತಾಗಿದ್ದು, ಜಾರಕಿಹೊಳಿ ಹೊರತುಪಡಿಸಿ ಬೇರೆ ಯಾರು ಈ ಸಂಬಂಧ ಯಾವುದೆ ಮಾತುಗಳನ್ನಾಡಲಿಲ್ಲ ಆ ಕಾರಣದಿಂದಾಗಿ ಬೆಂಗಳೂರಿನಲ್ಲಿ ರೆಬೆಲ್ಸ್ ಗಳು ಸಭೆ ನಡೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಮುಂದಿನ ನಿರ್ಧಾರ ಕೈಗೊಳ್ಳಲು ರೆಬೆಲ್ಸ್ ಗಳ ಸಭೆ:
ಯತ್ನಾಳ್ ಅವರನ್ನು ಉಚ್ಚಾಟನೆಗೊಳಿಸಿದ ರೆಬೆಲ್ಸ್ ನಾಯಕರು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಒಟ್ಟಾಗಿ ಕುಳಿತುಕೊಂಡು ಚರ್ಚಿಸಲು ಬೆಂಗಳೂರಿನಲ್ಲಿ ಇಂದು ಸಭೆ ಸೇರಲು ನಿರ್ಧಾರಿಸಿದ್ದಾರೆ ಮಾತ್ರವಲ್ಲದೆ ಈ ಸಭೆ ಯಾರೆಲ್ಲಾ ಹಾಜರಾಗುತ್ತಾರೆ ಎಂಬ ಬಗ್ಗೆ ಮತ್ತಷ್ಟು ಕುತೂಹಲ ಕೇರಳಿಸಿದೆ. ಒಟ್ಟಾರೆಯಾಗಿ ಈ ಸಭೆ ಬಳಿಕ ಕರ್ನಾಟಕ ಬಿಜೆಪಿಯ ಸಂಪೂರ್ಣ ಚಿತ್ರಣ ದೊರೆಯಲಿದೆ.

0 Comments