ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿಯಲ್ಲಿಗ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಕೇಂದ್ರದ ಹೈಕಮಾಂಡ್ ನಾಯಕರು ರಾಜ್ಯ ಬಿಜೆಪಿಯ ಬಣಬಡಿದಾಟವನ್ನು ನಿಲ್ಲಿಸಬೇಕು, ಈ ಎಲ್ಲಾ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿಯ ರೆಬೆಲ್ ನಾಯಕ ಯತ್ನಾಳ್ ಅವರನ್ನು ಪಕ್ಷದ ಶಿಸ್ತನ್ನು ಮೀರಿ ನಡೆದುಕೊಂಡ ಪರಿಣಾಮ ೬ ವರ್ಷಗಳ ಕಾಲ ಉಚ್ಚಾಟನೆಗೊಳಿಸಲು ನಿರ್ಧಾರಿಸಲಾಗಿದೆ. ಈ ಘಟನೆಯಿಂದ ಹಲವಾರು ರೆಬೆಲ್ ನಾಯಕರುಗಳಿಗೆ ಬಿಸಿ ಮುಟ್ಟಿಸಿದಾಂತಾಗಿದೆ. ಈ ಸಂಬಂಧ ಸಭೆ ಸೇರಿದ್ದ ಯತ್ನಾಳ್ ಪರವಾಗಿರುವ ನಾಯಕರು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿ ಯತ್ನಾಳ್ ಅವರ ಉಚ್ಚಾಟನೆಯ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಷ್ಕರಣೆ ಮಾಡುವಂತೆ ಮನವಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಉಚ್ಚಾಟನೆಯ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್ ನನ್ನ ಉಚ್ಚಾಟನೆಗೆ ಅಪ್ಪ ಮಕ್ಕಳು ಕಾರಣ, ಇಂದು ನನ್ನನ್ನು ಉಚ್ಚಾಟನೆ ಮಾಡಿಸಿ ಅವರು ಖುಷಿಯಾಗಿರಬಹುದು ಅದರೆ ಮುಂದೊಂದು ದಿನ ಯಡಿಯೂರಪ್ಪ ಹಾಗೂ ಅವರ ಮಕ್ಕಳನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೇ ಮತ್ತೇ ತಪ್ಪು ಮಾಡಿದರೆ ಶಿಕ್ಷೆ ಖಂಡಿತ:
ಒಬ್ಬ ವ್ಯಕ್ತಿ ಪದೇ ಪದೇ ತಪ್ಪು ಮಾಡುತ್ತಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಯತ್ನಾಳ್ ಅವರಿಗೆ ಅದ ಘಟನೆಯೇ ಸಾಕ್ಷಿ. ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಬೇಡಿ, ಯಾವುದೇ ರೀತಿಯ ಅಸಮಾಧಾನಗಳಿದ್ದರು ಪಕ್ಷದ ಚೌಕಟ್ಟಿನಲ್ಲಿ ಕುಳಿತುಕೊಂಡು ಬಗೆಹರಿಸಿಕೊಳ್ಳೊಣ ಬದಲಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು ಯತ್ನಾಳ್ ಪದೇ ಪದೇ ಅದೇ ತಪ್ಪನ್ನು ಮಾಡಿ ಈಗ ಉಚ್ಚಾಟನೆಗೊಳ್ಳುವಂತಾಗಿದೆ.
ಯಡಿಯೂರಪ್ಪ ಈ ರಾಜ್ಯದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು. ಹಿಂದುತ್ವ, ಜಾತಿಯತೇ, ಪ್ರಭಾವ, ಕಾರ್ಯವೈಖರಿ, ಹಣಬಲ ಇದು ಯಾವುದು ಇಲ್ಲದ ಸಮಯದಲ್ಲಿ ಅನಂತ್ ಕುಮಾರ್ ರಂತಹ ಯುವ ನಾಯಕರನ್ನು ಜೊತೆ ಸೇರಿಸಿಕೊಂಡು, ರಾಜ್ಯದ ಮೂಲೆ ಮೂಲೆಗಳಿಗೂ ಭೇಟಿ ಕೊಟ್ಟು, ಪಕ್ಷ ಸಂಘಟನೆಯನ್ನು ಮಾಡಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಎಲ್ಲಾ ಸವಲತ್ತುಗಳು ಇದ್ದಾಗ ಪಕ್ಷವನ್ನು ಗೆಲ್ಲಿಸುವುದು ದೊಡ್ಡ ವಿಷಯವಲ್ಲ ಬದಲಾಗಿ ಕಾರ್ಯಕರ್ತರು ಇಲ್ಲದ ಸಂಧರ್ಭದಲ್ಲಿ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪಕ್ಷ ಸಂಘಟಿಸಿ ಅಧಿಕಾರಕ್ಕೆರಿಸುವುದು ದೊಡ್ಡ ವಿಷಯವಲ್ಲ ಅದ್ದರಿಂದ ಅಂತಹ ಜನನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು ಎಂಬುದು ರಾಜಕೀಯ ಮುತ್ಸದ್ದಿಗಳ ಅಭಿಪ್ರಾಯ. ಸಮಸ್ಯೆ ಏನೇ ಇದ್ದಾರು ಅವುಗಳನ್ನು ಪಕ್ಷದ ಚೌಕಟ್ಟಿನ ಒಳಗೆ ಕುಳಿತುಕೊಂಡು ಬಗೆಹರಿಸುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ

0 Comments