ವಿಜೃಂಭನೆಯಿಂದ ಜರುಗಿದ ಸೋಮನಾಥೇಶ್ವರ ದೇವರ ಲಿಂಗ ಪ್ರತಿಷ್ಠೆ ಸಹಿತ ತಾಯಿ ಮಹಿಷಮರ್ದಿನಿ ಮತ್ತು ಗಣಪತಿ ದೇವರುಗಳ ಪತಿಷ್ಠೆ ಕಾರ್ಯ

ಮೂಡಬಿದ್ರೆ: ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿರುವ ಮೂಡಬಿದ್ರೆಯ ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರನ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶ ಕಾರ್ಯಕ್ರಮ ಕಳೆದ ಕೆಲ ದಿನಗಳಿಂದ ವಿಜೃಂಭನೆಯಿಂದ ಸಾಗುತ್ತಿದೆ. ಬ್ರಹ್ಮಕಲಶದ ಪ್ರಮುಖ ಕಾರ್ಯದಲ್ಲಿ ಒಂದಾದ ಪ್ರತಿಷ್ಠಾ ವಿಧಿ ವಿಧಾನಗಳು ಆರ್ಚಕರುಗಳ ನೇತೃತ್ವದಲ್ಲಿ ವಿಜೃಂಭನೆಯಿಂದ ಸಾಗುತ್ತಿದೆ. 

ಗಣಪತಿ ದೇವರು

ಮಾರ್ಚ್ ೨ ರ ಬೆಳಿಗ್ಗೆ ೧೧.೨೫ರ ವೃಷಭ ಲಗ್ನದಲ್ಲಿ ಶ್ರೀ ಸೋಮನಾಥೇಶ್ವರ ದೇವರ ಲಿಂಗ ಪ್ರತಿಷ್ಠೆ ಕಾರ್ಯಗಳು ನಡೆದವು. ಮಾರ್ಚ್ ೩, ಸೋಮವಾರ ಬೆಳಗಿನ ಶುಭ ಲಗ್ನ ಸುಮುಹೂರ್ತದಲ್ಲಿ ತಾಯಿ ಮಹಿಷಮರ್ಧಿನಿ ಹಾಗೂ ವಿಘ್ನ ನಿವಾರಕ ಗಣಪತಿಯ ಪ್ರತಿಷ್ಠಾ ಕಾರ್ಯಗಳು ಅದ್ದೂರಿಯಾಗಿ ಜರುಗಿದವು.

ಶ್ರೀ ಸೋಮನಾಥೇಶ್ವರನ ಲಿಂಗ

ದೇವರ ಪ್ರತಿಷ್ಠಾಪಣೆಯ ಈ ಪುಣ್ಯ ಕಾರ್ಯದಲ್ಲಿ ಊರ ಹಾಗೂ ಪರವೂರ ಭಕ್ತ ಸಮೂಹದ ಜೊತೆಗೆ ದೇವಳದ ಅನುವಂಶೀಯ ಆಡಳಿತ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ್ ಎಂ, ಪ್ರಧಾನ ಆರ್ಚಕ ಅಡಿಗಳ್ ಪಿ ಆನಂತ ಕೃಷ್ಣ ಭಟ್, ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳಾದ ನಿಲೇಶ್ ಶೆಟ್ಟಿ, ಶಿವಪ್ರಸಾದ್ ಆಚಾರ್ಯ ಹಾಗೂ ಮತ್ತಿತರರು ಭಾಗವಹಿಸಿದ್ದರು. 

Post a Comment

0 Comments