ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆಬ್ರವರಿ 28, 2025 ರಿಂದ ಮಾರ್ಚ್ 7, 2025 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಫೆಬ್ರವರಿ 28 ರಂದು ಮಧ್ಯಾಹ್ನ 2 ಗಂಟೆಗೆ ಮೂಡುಬಿದಿರೆ ಪೇಟೆಯಿಂದ ಹಸಿರು ಹೊರೆ ಕಾಣಿಕೆ ಕಾರ್ಯಕ್ರಮವು ನಡೆಯಲಿದ್ದು, ಸಾವಿರಾರು ಭಕ್ತರು ಮತ್ತು ವಾಹನಗಳ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ.
ಅದಕ್ಕಾಗಿ, ಮಧ್ಯಾಹ್ನ 2 ಗಂಟೆಯ ನಂತರ ಮೂಡುಬಿದಿರೆ ಪೇಟೆಯ ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ಮೂಡುಬಿದಿರೆ ನಗರಕ್ಕೆ ಬಾರದಂತೆ, ಬಾಹ್ಯ ವಲಯ (ಬೈಪಾಸ್) ರಸ್ತೆ ಅಥವಾ ವಿದ್ಯಾಗಿರಿ-ಮಾಸ್ತಿಕಟ್ಟೆ-ಬೊಗ್ರುಗುಡ್ಡೆ-ಪೇಪರ್ ಮೀಲ್ ಒಳ ರಸ್ತೆಗಳ ಮೂಲಕ ಸಂಚರಿಸಿ, ಹಸಿರು ಹೊರೆ ಕಾಣಿಕೆ ಮುಗಿಯುವವರೆಗೆ ಸಹಕರಿಸಬೇಕೆಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ವಿನಂತಿಸಿದ್ದಾರೆ.

0 Comments