ಉತ್ತರಪ್ರದೇಶ: ವಿಶ್ವದ ಅತೀ ದೊಡ್ಡ ಹಬ್ಬ ಎಂಬ ಖ್ಯಾತಿಗೆ ಪ್ರಾತ್ರವಾಗಿರುವ ಕುಂಭ ಮೇಳವು ೪೫ ದಿನಗಳ ಬಳಿಕ ಮಹಾಶಿವರಾತ್ರಿಯಂದು ಸಂಪನ್ನಗೊಂಡಿತು. ವಿಶ್ವದ ಮೂಲೆ ಮೂಲೆಯಿಂದ ಕೋಟ್ಯಾಂತರ ಜನ ಪ್ರಯಾಗ್ ರಾಜದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುಲಕಿತಗೊಂಡರು. ೧೪೪ ವರ್ಷಗಳಿಗೊಮ್ಮೆ ನಡೆಯುವ ಈ ಪೂರ್ಣ ಕುಂಭಮೇಳ ಉತ್ಸವವು ಜನವರಿ ೧೩,೨೦೨೫ರಂದು ಆರಂಭವಾಗಿ ನಿರಂತರ ೪೫ ದಿನಗಳ ಧಾರ್ಮಿಕ ಉತ್ಸವಗಳ ಬಳಿಕ ಫೆಬ್ರವರಿ ೨೬,೨೦೨೫ ರ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿತು.
೪೫ ದಿನಗಳ ಕಾಲ ನಿರಂತರವಾಗಿ ನಡೆದ ಅತೀ ದೊಡ್ಡ ಹಬ್ಬದಲ್ಲಿ ವಿಶ್ವದ ನಾನಾ ಭಾಗಗಳಿಂದ ಸಾಧುಸಂತರು, ಉದ್ಯಮಿಗಳು, ರಾಜಕೀಯ ಗಣ್ಯರುಗಳಂತಹ ವಿವಿಐಪಿಗಳನ್ನೊಂಡಂತೆ ಸುಮಾರು ೬೬.೩೦ ಕೋಟಿಯಷ್ಟು ಜನರು ಈ ಪುಣ್ಯ ಸ್ನಾನದಲ್ಲಿ ಭಾಗಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ವಿಶ್ವದ ಅತೀ ದೊಡ್ಡ ಹಬ್ಬ ಅಧಿಕೃತವಾಗಿ ಸಂಪನ್ನಗೊಂಡಿದ್ದು ಭಾರತದ ವೈದಿಕತೆಯ ಪರಿಚಯವನ್ನು ವಿಶ್ವಕ್ಕೆ ತೋರಿಸಿಕೊಟ್ಟು ಮತ್ತೊಮ್ಮೆ ಭಾರತ ಎಂದಿಗೂ ವಿಶ್ವಗುರು ಎಂಬುದನ್ನು ಸಾಭೀತುಪಡಿಸಿದೆ.

0 Comments