ದುಬೈ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ದುಬೈನಲ್ಲಿ ನಡೆದ ಐತಿಹಾಸಿಕ ಸೆಮಿ-ಫೈನಲ್ ಪಂದ್ಯದಲ್ಲಿ ಭಾರತ ತಂಡ ರೋಚಕ ಗೆಲುವನ್ನು ಸಾಧಿಸುವ ಮೂಲಕ ೨೦೨೩ರಲ್ಲಿ ಭಾರತದ ಅಹಮದಬಾದ್ ನ ಫೈನಲ್ ಸೋಲಿನ ಸೇಡನ್ನು ಟೀಂ ಇಂಡಿಯಾ ತೀರಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಂಟಿಗೆ ಬಂದ ಆಸೀಸ್ ಆಟಗಾರರು ಭಾರತದ ಸ್ಪೀನ್ ದಾಳಿಗೆ ಕೊಂಚ ಮಟ್ಟಿಗೆ ತತ್ತರಿಸಿದರು. ನಿಗದಿತ ೫೦ ಒವರ್ ಗಳು ಮುಗಿಯುವ ಮುಂಚೆಯೇ ಆಸ್ಟ್ರೇಲಿಯಾ ತಂಡ ೨೬೪ ರನ್ ಗಳನ್ನು ಗಳಿಸಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಆಸೀಸ್ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತಕ್ಕೆ ತಂಡದ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭವನ್ನು ನೀಡಿದರು. ಅದರೆ ೨೮ ರನ್ ಗಳಿಸುವಷ್ಟರಲ್ಲಿ ತನ್ನ ವಿಕೆಟ್ ಒಪ್ಪಿಸಿದರು ಬಳಿಕ ಕೊಹ್ಲಿ ಹಾಗೂ ಅಯ್ಯರ್ ಉತ್ತಮ ಜತೆಯಾಟವನ್ನು ಆಡಿ ಗೆಲುವನ್ನು ಮತ್ತಷ್ಟು ಸುಲಭವಾಗಿಸಿದರು. ಅಂತಿಮವಾಗಿ ಪಾಂಡ್ಯಾ ಹಾಗೂ ಕೆ.ಎಲ್ ರಾಹುಲ್ ಉತ್ತಮ ಜತೆಯಾಟವನ್ನು ಆಡಿ ಭಾರತದ ಗೆಲುವಿನ ಹಾದಿಯನ್ನು ಭದ್ರಗೊಳಿಸಿದರು. ಈ ಮೂಲಕ ೨೦೨೩ರ ವಿಶ್ವಕಪ್ ನ ಸೋಲನ್ನು ಭಾರತ ದುಬೈನಲ್ಲಿ ತೀರಿಸಿಕೊಂಡು ಆಸ್ಟ್ರೇಲಿಯಾ ತಂಡವನ್ನು ತನ್ನ ತವರಿಗೆ ಕಳುಹಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.

0 Comments