ಬೆದ್ರದ ಮೊಸರು ಕುಡಿಕೆ ಉತ್ಸವದಲ್ಲಿ ಈ ಬಾರಿ ಇಬ್ಬರೂ ಕೃಷ್ಣವೇಷಧಾರಿಗಳು; ಆಡಳಿತ ಮೊಕ್ತೇಸರರಾದ ಗುರುಪ್ರಸಾದ್ ಹೊಳ್ಳ ಹೇಳಿಕೆ


ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡುಬಿದಿರೆಯ ಐತಿಹಾಸಿಕ 110 ನೇ ವರ್ಷದ ಮೂಡುಬಿದಿರೆ ಮೊಸರುಕುಡಿಕೆ ಉತ್ಸವವು ಇದೇ ಬರುವ ಸೆಪ್ಟೆಂಬರ್ 5 ರ ಶನಿವಾರದಂದು ಜರುಗಲಿರುವುದು. ಮೆರವಣಿಗೆಯ ಉದ್ದಕ್ಕೂ ತೂಗುಹಾಕುವ ಮೊಸರುಕುಡಿಕೆಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಹಾಗೂ ಒಬ್ಬನೇ ಕೃಷ್ಣ ವೇಷಧಾರಿಗೆ ಹೊರೆ ಆಗಬಾರದು ಎಂಬ ಉದ್ದೇಶದಿಂದ ಈ ಸಲದ ಉತ್ಸವಕ್ಕೆ 2 ಕೃಷ್ಣವೇಷಧಾರಿಗಳನ್ನು ನಿಯೋಜಿಸುವುದೆಂದು ತೀರ್ಮಾನಿಸಿರುತ್ತೇವೆ. ಮೂಡುಬಿದಿರೆಯ ಭಕ್ತಾಭಿಮಾನಿಗಳು ಎಂದಿನಂತೆಯೇ ಸಹಕರಿಸಬೇಕಾಗಿ  ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮೊಕ್ತೇಸರರಾದ ಗುರುಪ್ರಸಾದ್ ಹೊಳ್ಳ ವಿನಂತಿಸಿಕೊಂಡಿದ್ದಾರೆ

                         

ಇಬ್ಬರೂ ಕೃಷ್ಣವೇಷಧಾರಿಗಳು ಈ ಬಾರಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಒಬ್ಬ ಕೃಷ್ಣವೇಷಾಧಾರಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದ ಮೂಡುಬಿದಿರೆಯ ಜನತೆಗೆ ಈ ಬಾರಿ ಇಬ್ಬರು ಕೃಷ್ಣವೇಷಾಧಾರಿಗಳ ಸೊಬಗನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ದೊರೆಯಲಿದೆ. 110ನೇ ವರ್ಷದ ಮೊಸರು ಕುಡಿಕೆಗೆ ಇಬ್ಬರು ಕೃಷ್ಣವೇಷಧಾರಿಗಳ ಮೂಲಕ ಮತ್ತಷ್ಟು ಮೆರುಗನ್ನು ಹೆಚ್ಚಿಸುವ ನಿರೀಕ್ಷೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿಕೊಡಬೇಕೆಂದು ದೇವಸ್ಥಾನದ ಆಡಳಿಯ ಮೋಕ್ತೆಸರರು ವಿನಂತಿಸಿಕೊಂಡಿದ್ದಾರೆ.